Jharkhand: ಬಿಯರ್ ಬಾರ್ ಒಳಗಡೆ ವಿಭಿನ್ನ 'ಆಟ'.. ದೃಶ್ಯ ನೋಡಿ ಬೆಚ್ಚಿ ಬಿದ್ದಿ ಪೊಲೀಸರು!

crime-text-logo-brand
Published on

ರಾಂಚಿ: ಪೊಲೀಸರು ಜಾರ್ಕಾಂಡ್(Jharkhand)​ನ ರಾಂಚಿಯಲ್ಲಿ ತಡರಾತ್ರಿ ಬೀರ್ ಬಾರ್ ಮೇಲೆ ದಾಳಿ ನಡೆಸಿದ್ದು, ಅಲ್ಲಿ ಜೂಜಾಟ ಮತ್ತು ಅಶ್ಲೀಲ ನೃತ್ಯ ನೋಡಿ ಬೆಚ್ಚಿಬಿದ್ದಿದ್ದಾರೆ.

ಆರೋಪಿಗಳಿಂದ 1.5 ಲಕ್ಷ ರೂ. ವಶಪಡಿಸಿಕೊದ್ದು, ಬಾರ್‌ನ ಮಾಲೀಕ ಮತ್ತು ವ್ಯವಸ್ಥಾಪಕರ ಒಪ್ಪಿಗೆಯೊಂದಿಗೆ ಜೂಜಾಟವನ್ನು ಆಡಲಾಗಿದೆ. ಯಾವುದೇ ಅನುಮಾನ ಬಾರದಂತೆ ಅಶ್ಲೀಲ ಹಾಡುಗಳೊಂದಿಗೆ ನೃತ್ಯ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಯರ್ ಬಾರ್‌ನ ಕೊಠಡಿಯಿಂದ ತುಂಬಾ ಜೋರಾಗಿ ಹಾಡು ನುಡಿಸುತ್ತಿದ್ದಾರೆ ಎಂದು ತಡರಾತ್ರಿ ಜನರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಕೊತ್ವಾಲಿ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಎಸ್ಪಿ ತಿಳಿಸಿದ್ದಾರೆ.

ದೀಪಾವಳಿಯ ಸಂದರ್ಭದಲ್ಲಿ ಯುವಕರು ಹೋಟೆಲ್ ಕೋಣೆಗಳನ್ನು ತೆಗೆದುಕೊಂಡು ಅಲ್ಲಿ ಜೂಜಾಡುತ್ತಾರೆ. ಎಲ್ಲಾ ಹೋಟೆಲ್‌ಗಳು ಮತ್ತು ಲಾಡ್ಜ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net