Hemant Soren: ಹೇಮಂತ್ ಸೊರೆನ್ ಜೊತೆ ಹೇಮಂತ್ ಸೊರೆನ್ ಭೇಟಿ..ಒರಿಜಿನಲ್​ ಯಾರು?

Hemant Soren
soren
Published on

ನವದೆಹಲಿ: ಒಬ್ಬ ಮನುಷ್ಯನನ್ನು ಹೋಲುವ ಏಳು ಮಂದಿ ಮನುಷ್ಯರು ವಿಶ್ವದಲ್ಲಿ ಇರುತ್ತಾರೆ ಎಂದು ಹಿರಿಯರು ಹೇಳುತ್ತಿದ್ದರು. ಅದರಂತೆ ಪ್ರಧಾನಿ ಮೋದಿ, ರಜನಿ ಕಾಂತ್​, ಸಿದ್ದರಾಮಯ್ಯ ಮತ್ತು ಇತರ ಕೆಲವು ಸೆಲೆಬ್ರಿಟಿಗಳನ್ನು ಹೋಲುವ ಜನರನ್ನು ನೋಡಿರುತ್ತೀರಿ. ಇತ್ತೀಚೆಗಷ್ಟೇ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್(Hemant Soren) ಅವರಂತೆ ಕಾಣುವ ವ್ಯಕ್ತಿಯೊಬ್ಬ ಅವರನ್ನು ಭೇಟಿ ಮಾಡಿದ್ದು, ಸ್ವತಃ ಮುಖ್ಯಮಂತ್ರಿಗಳೇ ಆ ಫೋಟೋಗಳನ್ನು ಹಂಚಿಕೊಂಡಿರುವುದು ನೆಟಿಜನ್‌ಗಳಿಗೆ ಅಚ್ಚರಿ ಮೂಡಿಸಿದೆ.

ರಾಂಚಿಯ ರಂಗಭೂಮಿ ಕಲಾವಿದ ಮುನ್ನಾ ಲೋಹ್ರಾ ಇತ್ತೀಚೆಗಷ್ಟೇ ಹೇಮಂತ್ ಸೊರೆನ್ ನಿವಾಸದಲ್ಲಿ ಭೇಟಿಯಾಗಿದ್ದರು. ಹೇಮಂತ್ ಸೊರೆನ್ ಈ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ತಮ್ಮ ಅಧಿಕೃತ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. 'ಹೇಮಂತ್ ಸೋರೆನ್ ಅವರನ್ನು ಭೇಟಿಯಾದ ಮತ್ತೊಬ್ಬ ಹೇಮಂತ್' ಎಂಬ ಶೀರ್ಷಿಕೆಯನ್ನು ಸೇರಿಸಿದ್ದಾರೆ.

ಅಣ್ಣ-ತಮ್ಮಂದಿರೆಂದ ನೆಟ್ಟಿಗರು: Hemant Soren

ಇದರಿಂದ ನೆಟ್ಟಿಗರು ಇವರಿಬ್ಬರು ಒಂದೇ ರೀತಿ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕುಂಭಮೇಳದಲ್ಲಿ ಬೇರ್ಪಟ್ಟ ಅಣ್ಣ-ತಮ್ಮಂದಿರು ಮತ್ತೆ ಒಂದಾದ ಹಾಗಿದೆ ಎಂದು ನೆಟಿಜನ್ಸ್​ ಕಾಮೆಂಟ್​ ಮಾಡುತ್ತಿದ್ದು, ಈ ಪೋಸ್ಟ್ ವೈರಲ್​ ಆಗಿದೆ.

ಇಷ್ಟಕ್ಕೂ ಫೋಟೋದ ಎಡಭಾಗದಲ್ಲಿ ಹೇಮಂತ್ ಸೊರೆನ್ ಮತ್ತು ಬಲಭಾಗದಲ್ಲಿ ಸ್ಕಾರ್ಫ್ ಹೊಂದಿರುವ ವ್ಯಕ್ತಿ ಲೋಹಾ ಅವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net