9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆ!

91
Published on

ಜಾರ್ಖಂಡ್​ನಲ್ಲಿ 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (RIMS) ಒಂಬತ್ತು ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.


ಜಾರ್ಖಂಡ್‌ನ ರಾಮಗಢ ಜಿಲ್ಲೆಯ ನಿವಾಸಿಯಾಗಿರುವ ಮಗುವನ್ನು ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳೊಂದಿಗೆ ರಿಮ್ಸ್‌ಗೆ ದಾಖಲಿಸಲಾಗಿದೆ.


ಆಸ್ಪತ್ರೆಯಲ್ಲಿ ದಾಖಲಾದ ಈ ವರ್ಷದ ಮೊದಲ ಹಕ್ಕಿ ಜ್ವರ ಪ್ರಕರಣವಾಗಿದೆ. ಕೋವಿಡ್ -19 ತರಹದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಮಗುವನ್ನು ಇತರರಿಂದ ಪ್ರತ್ಯೇಕಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ವರ್ಷ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು, ಸಾವಿರಾರು ಪಕ್ಷಿಗಳು ಮೃತಪಟ್ಟಿದ್ದವು.


ಮಗುವಿನ ಮೂಗಿನ ಸ್ವ್ಯಾಬ್ ಅನ್ನು ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗಕ್ಕೆ ಕಳುಹಿಸಲಾಗಿದ್ದು, ಹಕ್ಕಿಜ್ವರ ದೃಢಪಟ್ಟಿದೆ ಎಂದು ಮಕ್ಕಳ ವಿಭಾಗದ ಡಾ.ರಾಜೀವ್ ಮಿಶ್ರಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net