ಬ್ಯಾಂಕ್​ ಖಾತೆಯಲ್ಲಿ ಹಣವಿಲ್ಲ; ಚೆಕ್​ ಕೊಡುವ ಶೋಕಿಗೇನೂ ಕಡಿಮೆಯಿಲ್ಲ! 50 ಲಕ್ಷ ರೂ.... | Jewellery

ವಿಜಯವಾಣಿ - 2025-05-10T130530.620
Published on

Jewellery: ನನಗೆ ಚಿತ್ರನಟರು, ರಾಜಕೀಯ ವ್ಯಕ್ತಿಗಳ ಪರಿಚಯವಿದೆ ಎಂದು ನಟಿಸಿ ದುಬಾರಿ ಬೆಲೆಯ ಆಭರಣಗಳನ್ನು ಖರೀದಿಸಿ, ಅಂಗಡಿ ಮಾಲೀಕರಿಗೆ ಪಂಗನಾಮ ಹಾಕುವ ಸುಂದರಿ ಇದೀಗ ಪೊಲೀಸರಿಂದ ತಲೆಮರಿಸಿಕೊಂಡಿರುವ ಘಟನೆ ಹೈದರಾಬಾದ್​ನ ಗಚಿಬೌಲಿಯಲ್ಲಿ ವರದಿಯಾಗಿದೆ.

5೦ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದ ಆರೋಪಿ ಮಹಿಳೆ, ತನಗೆ ಸಿನಿಮಾ ಕಲಾವಿದರು, ರಾಜಕಾರಣಿಗಳು ಗೊತ್ತಿದ್ದಾರೆ ಎಂದು ಅವರೊಂದಿಗಿರುವ ಫೋಟೋಗಳನ್ನು ತೋರಿಸಿ ಅಂಗಡಿ ಮಾಲೀಕನಿಗೆ ಮೋಸ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಸದ್ಯ ಮಹಿಳೆ ರಮಾದೇವಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಶೀಘ್ರವೇ ಬಂಧಿಸುವ ಭರವಸೆ ನೀಡಿದ್ದಾರೆ.

ಅಬಿಡ್ಸ್‌ನಲ್ಲಿರುವ ಆಭರಣ ಅಂಗಡಿಯ ಮಾಲೀಕರಿಗೆ ವಾಟ್ಸಾಪ್ ವೀಡಿಯೊ ಕರೆ ಮಾಡಿ ತನ್ನಿಷ್ಟದ ಡಿಸೈನ್​ಗಳ ಆಭರಣಗಳನ್ನು ಆಯ್ಕೆ ಮಾಡಿಕೊಂಡ ಕಿರಾತಕಿ, ದೊಡ್ಡ ಮನೆಯವರು ಎಂಬಂತೆ ಬಿಂಬಿಸಿ, ಚೆಕ್​ ಕೊಟ್ಟು ಹೋಗಿದ್ದಾಳೆ. ಚೆಕ್ ನೀಡಿದ ಎರಡು ದಿನಗಳ ನಂತರ 50 ಲಕ್ಷ ರೂ. ಬಿಲ್​ ಹಣವನ್ನು ಡ್ರಾ ಮಾಡಿಕೊಳ್ಳಲು ಹೋದ ಮಾಲೀಕನಿಗೆ ಅಚ್ಚರಿ ಕಾದಿತ್ತು. ಕಾರಣ, ಆಕೆಯ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿದೆ. ಈ ವೇಳೆ ಹಣ ನೀಡಲು ನಿರಾಕರಿಸಿದ ಮಹಿಳೆ, ಪೊಲೀಸರ ಬಲೆಗೆ ಸಿಗದಂತೆ ಪರಾರಿಯಾಗದ್ದಾಳೆ.

ಘಟನೆಯ ಬೆನ್ನಲ್ಲೇ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಾಲೀಕ, ಆರೋಪಿ ರಮಾದೇವಿ ಬಂಧನಕ್ಕೆ ಮನವಿ ಮಾಡಿದ್ದಾರೆ. ಈಕೆಯ ಜಾಲ ಬೆನ್ನತ್ತಿದ ಖಾಕಿ ಪಡೆಗೆ ಈ ಹಿಂದೆ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ಒಂದು ಮತ್ತು ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ಮಹಿಳೆಯ ಹೆಸರಿನಲ್ಲಿ ದಾಖಲಾಗಿರುವುದು ತಿಳಿದುಬಂದಿದೆ. ಇದೇ ರೀತಿಯ ಆಭರಣಗಳನ್ನು ಕದ್ದಿದ್ದಕ್ಕಾಗಿ ಪ್ರಕರಣಗಳು ದಾಖಲಾಗಿವೆ ಎಂಬುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net