ಚಿಂತಾಮಣಿ: ತಾಲೂಕನ ನಾಗದೇನಹಳ್ಳಿಯ ನಾರಾಯಣಸ್ವಾಮಿ ಎಂಬುವವರ ಮನೆಯಲ್ಲಿ 4 ಲಕ್ಷ ರೂ. ಬೆಲೆ ಚಿನ್ನಾಭರಣ ಕಳ್ಳತನವಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.30 ಗ್ರಾಂ ಬಂಗಾರದ ಮಾಂಗಲ್ಯ ಚೈನ್, 3 ಗ್ರಾಂ ಉಂಗುರ, 2 ಗ್ರಾಂ ಒಂದು ಜತೆ ಕಿವಿಯೋಲೆ ಒಟ್ಟು 35 ಗ್ರಾಂ ತೂಕದ 4 ಲಕ್ಷ ರೂ.ಬೆಲೆ ಬಂಗಾರದ ಆಭರಣಗಳನ್ನು ರೂಮಿನಲ್ಲಿ ಬ್ಯಾಗಿನಲ್ಲಿಟ್ಟಿದ್ದೆವು.ಆ.6 ರಂದು ಬೆಳಗ್ಗೆ ನಾವು ಹಳೇ ಮನೆಯಲ್ಲಿದ್ದ ವಸ್ತುಗಳನ್ನು ಹೊಸ ಮನೆಗೆ ಸಾಗಿಸುತ್ತಿದ್ದ ಸಮಯದಲ್ಲಿ ಬ್ಯಾಗಿನಲ್ಲಿಟ್ಟಿದ್ದ ಬಂಗಾರದ ಒಡೆವಗಳನ್ನು ನೋಡಿದಾಗ ಇರಲಿಲ್ಲ.