

ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಜೆಟ್ ಏರ್ವೇಸ್ ಗುರುವಾರ ಪರೀಕ್ಷಾರ್ಥ ಹಾರಾಟ ನಡೆಸಿತು. ಇದರೊಂದಿಗೆ ಈ ವರ್ಷ ಅಕ್ಟೋಬರ್ನಲ್ಲಿ ವಾಣಿಜ್ಯ ಹಾರಾಟಕ್ಕೆ ಸಿದ್ಧತೆ ಆರಂಭಿಸಿದೆ. ಜೆಟ್ ಏರ್ವೇಸ್ 2019ರ ಏಪ್ರಿಲ್ನಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ತನ್ನ ಎಲ್ಲ ಹಾರಾಟವನ್ನು ನಿಲ್ಲಿಸಿತ್ತು. ಗುರುವಾರ ಟೆಸ್ಟ್ ್ಲೆ$ಟ್ ಮೂಲಕ ವಿಮಾನಗಳ ಸುರಕ್ಷತೆಯನ್ನು ಪರಿಶೀಲಿಸಿದೆ.
ಜೆಟ್ ಏರ್ವೇಸ್ ದಿವಾಳಿ ಪ್ರಕ್ರಿಯೆ ಪೂರ್ಣ ಗೊಳಿಸಿದ ಎರಡು ವರ್ಷಗಳ ನಂತರ, ಜಲಾನ್ ಕಾಲ್ರಾಕ್ನ ಪರಿಹಾರ ಸೂತ್ರಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) 2021ರ ಜೂನ್ನಲ್ಲಿ ಹಸಿರು ನಿಶಾನೆ ತೋರಿತ್ತು.
* ಮೇ 5 ನಮ್ಮ 29ನೇ ಜನ್ಮದಿನ. ನಮ್ಮ ಪಾಲಿಗೆ ಇದು ಭಾವನಾತ್ಮಕ ದಿನ. ಮತ್ತೆ ಹಾರಾಟ ನಡೆಸುವ, ಕೆಲಸ ಮಾಡಲು ಶುರುಮಾಡುವುದನ್ನು ನಾವು ಎದುರು ನೋಡುತ್ತಿದ್ದೆವು. ಈ ದಿನಕ್ಕಾಗಿ ನಾವು ಪ್ರಾರ್ಥಿಸುತ್ತಿದ್ದೆವು. ಜೆಟ್ನ ನಿಷ್ಠಾವಂತ ಗ್ರಾಹಕರಿಗೆ ಸೇವೆ ಒದಗಿಸಲು ಸಜ್ಜಾಗುತ್ತಿದ್ದೇವೆ ಎಂದು ಜೆಟ್ ಏರ್ವೇಸ್ ಹೇಳಿದೆ.
* ನಷ್ಟಕ್ಕೀಡಾಗಿ ಸ್ಥಗಿತಗೊಂಡಿದ್ದ ವಿಮಾನ ಸಂಸ್ಥೆಯ ಖರೀದಿ ಬಿಡ್ನಲ್ಲಿ ಜಲಾನ್ ಕಾಲ್ರಾಕ್ ಕನ್ಸೋರ್ಟಿಯಂ ಗೆದ್ದುಕೊಂಡಿದ್ದು, ಜೆಟ್ ಏರ್ವೇಸ್ನ ಕೇಂದ್ರ ಕಚೇರಿ ಮುಂಬೈ ಬದಲು ದೆಹಲಿಯಲ್ಲಿ ಇರಲಿದೆ ಎಂದು ಹೇಳಿತ್ತು.
* ಜೆಟ್ ಏರ್ವೇಸ್ನ ಮೊದಲ ವಿಮಾನ ದೆಹಲಿ&ಮುಂಬೈ ಮಾರ್ಗದಲ್ಲಿ ಸಂಚರಿಸಲಿದೆ. ಸಂಚಾರವನ್ನು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಸ್ಥಗಿತಗೊಳಿಸಿದ್ದ ವಿಮಾನಯಾನ ಸಂಸ್ಥೆಯೊಂದು ಸೇವೆಯನ್ನು ಪುನಶ್ಚೇತನಗೊಳಿಸುತ್ತಿರುವುದು ವಿಮಾನ ಯಾನ ಇತಿಹಾಸದಲ್ಲಿ ಇದೇ ಮೊದಲ ಸಲ.