ಕರುಣಾ ಸಾಗರ ಯೇಸು

esu
Published on

ಕ್ರಿಸ್ತನ ಮರಣಾನಂತರ ಆತ ಆರಿಸಿಕೊಂಡಿದ್ದ ಹನ್ನೊಂದು ಮಂದಿ ನಿಷ್ಟಾವಂತ ಶಿಷ್ಯರ ಜೊತೆಗೆ ಯೇಸುವಿನ ಮಾತುಗಳಿಂದ ಮನಃಪರಿ ವರ್ತನೆಗೊಂಡ ಸೌಲ್ ಎಂಬ ಧಾರ್ವಿುಕ ಮೂಲಭೂತವಾದಿ, ಪೌಲ್ ಎಂಬ ನಾಮಧೇಯದಿಂದ ಯೇಸುವಿನ ಕಟ್ಟಾ ಶಿಷ್ಯನಾದ. ಸ್ವತಃ ವಿದ್ವಾಂಸನಾಗಿದ್ದ ಈತ ಇತರ ಶಿಷ್ಯರೊಡಗೂಡಿ ಇಸ್ರೇಲಿನ ಅಕ್ಕಪಕ್ಕದ ಪ್ರಾಂತ್ಯ, ಪ್ರದೇಶಗಳಲ್ಲೆಲ್ಲ ಕ್ರಿಸ್ತನ ಬೋಧನೆಗಳನ್ನು ಪ್ರಚಾರ ಮಾಡಿದ. ಎಲ್ಲೆಡೆಗಳಲ್ಲೂ ಯೇಸು ಕ್ರಿಸ್ತನನ್ನು ವಿಜೃಂಭಿಸುತ್ತ, ಆತನ ತತ್ವಗಳ ಪರಿಪಾಲನೆಯೇ ಅವರ ಬದುಕಿಗೆ ಅರ್ಥ ಮತ್ತು ಮುಕ್ತಿ ನೀಡುವ ಸಾಧನಗಳೆಂದು ಮನದಟ್ಟು ಮಾಡಿಸಿದ. ಫಿಲಿಪ್ಪೀನಿಯರು, ಕೊರಿಂಥಿ ಯನ್ನರು, ಥೆಸಲೋನಿಕರು ಮುಂತಾಗಿ ಅನೇಕ ಜನಾಂಗಗಳಿಗೆ ಆತ ಬರೆದ ಸುದೀರ್ಘ ಪತ್ರಗಳು ವೈಚಾರಿಕತೆಯನ್ನು ಅಂದಿನ ಜನರಲ್ಲಿ ನೆಲೆಗೊಳಿಸಿದವು. ಪವಿತ್ರ ಬೈಬಲ್ ಗ್ರಂಥದ ಹೊಸಒಡಂಬಡಿಕೆಯ ಅರ್ಧ ಭಾಗ ಆತನ ಅರ್ಥಪೂರ್ಣ ಮತ್ತು ವೈಚಾರಿಕ ಪತ್ರಗಳಿಂದ ತುಂಬಿದ್ದು, ಇಂದಿಗೂ ಚರ್ಚ್​ಗಳಲ್ಲಿ ಅವುಗಳ ಪಠನೆ ಜರುಗುತ್ತಿವೆ.

ಇಂತಹ ಶಿಷ್ಯರನ್ನು ರೂಪಿಸಿದ ಕ್ರಿಸ್ತ ತಾನು ಈ ಜಗತ್ತಿನಲ್ಲಿ ನರಮಾನವನಾಗಿ ಜನಿಸಿದರೂ ದೇವಮಾನವನಾಗಿ ಬದುಕಿ, ತನ್ನ ಜನರಿಗೆ ಮುಕ್ತಿ ಮಾರ್ಗ ತೋರಿಸಿಕೊಟ್ಟ. ಆತ ಮರಣಿಸಿ ಮೂರು ಶತಮಾನ ಗಳಾದ ಬಳಿಕ, ಕ್ರೖೆಸ್ತ ಧರ್ಮ, ಅದರ ಅನá-ಯಾಯಿಗಳನ್ನು ಹಿಂಸಿಸುತ್ತಿದ್ದ ರೋಮ್ ಸಾಮ್ರಾಜ್ಯದ ಅಂದಿನ ಚಕ್ರವರ್ತಿ ಕಾನ್ಸ್ಟೆಂಟೈನ್ ತಾನೇ ಕ್ರೖೆಸ್ತ ಧರ್ಮವನ್ನು ಸ್ವೀಕರಿಸಲು, ಇಡೀ ಯುರೋಪ್ ಖಂಡದಲ್ಲಿ ಕ್ರೖೆಸ್ತ ಧರ್ಮ ನೆಲೆಗೊಂಡು ಯೇಸು ಕ್ರಿಸ್ತ ಅವರೆಲ್ಲರ ಆರಾಧ್ಯ ದೈವ ವಾದ. ತರುವಾಯ, ಅವರೆಲ್ಲರ ಜೀವನ ಕ್ರಮವೇ ಬದಲಾಗಿ, ಶಾಂತಿ, ಪ್ರೀತಿ, ದಯೆ, ಕರುಣೆ, ಭ್ರಾತೃತ್ವಗಳು ಮನುಷ್ಯ-ಮನುಷ್ಯರ ನಡುವೆ ಬೇರೂರಿದವು. ಹೀಗೆ, ಎರಡು ಸಾವಿರ ವರ್ಷಗಳ ಹಿಂದೆ ಈ ಲೋಕದಲ್ಲಿ ಅವತರಿಸಿದ ದೇವಮಾನವ ಯೇಸು ಕರುಣಾ ಸಾಗರ ದಂತಾಗಿ ಒಂದು ನೂತನ ಕ್ರೖೆಸ್ತ ಯುಗವನ್ನೇ ಸೃಷ್ಟಿಸಿ, ಮಾನವ ಜನಾಂಗಕ್ಕೆ ಹೊಸ ಧಾರ್ವಿುಕ ರೀತಿ-ನೀತಿ ತಿಳಿಯಪಡಿಸಿ ಅವರನ್ನು ಸತ್ಯ, ಸುಂದರ ಹಾಗೂ ಶಾಂತಿಮಯವಾದ ಬದುಕು ಸಾಗಿಸಲು ಪ್ರೇರೇಪಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net