

ರಾಮನಗರ: ಹಿಂದೆ ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣ ವಿಚಾರ ದೊಡ್ಡಮಟ್ಟದಲ್ಲಿ ವಿವಾದಕ್ಕೀಡಾಗಿತ್ತು. ಇದು ರಾಜಕೀಯವಾಗಿಯೂ ಸದ್ದು ಮಾಡಿತ್ತು. ಇದೀಗ ಮತ್ತೆ ಕನಕಪುರದಲ್ಲಿ ಏಸುಕ್ರಿಸ್ತನ ವಿಚಾರವಾಗಿ ಸಂಘರ್ಷ ಆರಂಭವಾಗಿದೆ.
ಕನಕಪುರದ ಕೋಡಿಹಳ್ಳಿ ಹೋಬಳಿ ಹಾಗೂ ಉಯ್ಯಂಬಳ್ಳಿ ಗ್ರಾಮದಲ್ಲಿ ಪಡಿತರಿಗೆ ನೀಡುವ ರೇಷನ್ ಕಾರ್ಡ್ನಲ್ಲಿ ಏಸುಕ್ರಿಸ್ತನ ಫೋಟೋ ಮುದ್ರಣ ಮಾಡಿ ಹಂಚಿಕೆ ಮಾಡಲಾಗಿದೆ. ಮುದ್ರಣವಾಗಿರುವ ರೇಷನ್ ಕಾರ್ಡ್ಗಳು ಗಮನಕ್ಕೆ ಬರುತ್ತಿದ್ದಂತೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ವಿಚಾರವಾಗಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ನಾಗಾರ್ಜುನ್ ರಾಮನಗರ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.