

ಬೆಂಗಳೂರು: ಭಾರತೀಯ ತಾಂತ್ರಿಕ ಸಂಸ್ಥೆಗಳು (ಐಐಟಿ) ಒಳಗೊಂಡಂತೆ ದೇಶದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ-2025 ಮೇನ್ಸ್-2ರ ಲಿತಾಂಶ ಶನಿವಾರ ಪ್ರಕಟವಾಗಿದೆ. ರಾಜ್ಯಕ್ಕೆ ಬೆಂಗಳೂರಿನ ಕಸವನಹಳ್ಳಿ ನಾರಾಯಣ ಕೊ-ಕಾವೇರಿ ಭವನ್ (ಬೆಳ್ಳಂದೂರು) ಶಾಖೆಯ ಕುಶಾಗ್ರ ಗುಪ್ತಾ ಟಾಪರ್ ಆಗಿದ್ದಾರೆ.
100 ಪರ್ಸೆಂಟೈಲ್ ಅಂಕಗಳನ್ನು ಪಡೆಯುವ ಮೂಲಕ ದೇಶಾದ್ಯಂತ ಮೊದಲ ಸ್ಥಾನವನ್ನು ಹಂಚಿಕೊಂಡಿರುವ 24 ಮಂದಿಯಲ್ಲಿ ಕುಶಾಗ್ರ ಗುಪ್ತನೂ ಒಬ್ಬನಾಗಿದ್ದಾನೆ. ರಾಜ್ಯದಿಂದ ಕುಶಾಗ್ರ ಗುಪ್ತಾ ಟಾಪರ್ ಜತೆಗೆ 100 100 ಪರ್ಸೆಂಟೈಲ್ ಅಂಕಗಳನ್ನು ಪಡೆದಿರುವ ಏಕೈಕ ವಿದ್ಯಾರ್ಥಿಯಾಗಿರುವ ಜತೆಗೆ ಇದೇ ವರ್ಷ ಜನವರಿಯಲ್ಲಿ ನಡೆದಿದ್ದ ಜೆಇಇ ಮೇನ್ಸ್-1ರಲ್ಲಿ ಕೂಡ ರಾಜ್ಯದ ಟಾಪರ್ ಆಗಿದ್ದ ಎಂಬುದು ವಿಶೇಷ.
ಕುಶಾಗ್ರ ಹೊರತಾಗಿ ಸಹಕಾರ ನಗರದ ನಾರಾಯಣ ಒಲಂಪಿಯಾಡ್ ಶಾಲೆಯ ಮಾತಂಗಿ ಪಾರ್ಥಸಾರಥಿ ಮತ್ತು ರತನ್ ಎಸ್. ಭಗವತಿ 99.99 100 ಪರ್ಸೆಂಟೈಲ್ ಅಂಕ ಪಡೆದಿದ್ದಾರೆ. ಕ್ರಮವಾಗಿ ಅಖಿಲ ಭಾರತ ಮಟ್ಟದ 81 ಮತ್ತು 84ನೇ ರ‌್ಯಾಂಕ್ ಗಳಿಸಿದ್ದಾರೆ.
ರಾಜಸ್ಥಾನಕ್ಕೆ ಹೆಚ್ಚು ಸ್ಥಾನ:
ಈ ಬಾರಿ ಒಟ್ಟು 24 ಅಭ್ಯರ್ಥಿಗಳು 100 100 ಪರ್ಸೆಂಟೈಲ್ ಅಂಕ ಗಳಿಸಿದ್ದಾರೆ. ರಾಜಸ್ಥಾನವು 7 ವಿದ್ಯಾರ್ಥಿಗಳೊಂದಿಗೆ ಅತಿ ಹೆಚ್ಚು ಅಂಕ ಗಳಿಸಿದವರನ್ನು ಹೊಂದಿದೆ. ಇದರ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ತೆಲಂಗಾಣದ ತಲಾ 3 ವಿದ್ಯಾರ್ಥಿಗಳು, ದೆಹಲಿ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನ ತಲಾ ಇಬ್ಬರು 100 100 ಪರ್ಸೆಂಟೈಲ್ ಗಳಿಸಿದ್ದಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ಇದೇ ತಿಂಗಳು ನಡೆಸಿದ್ದ ಜೆಇಇ ಮೇನ್ಸ್ ಸೆಷನ್-2ರ ಪರೀಕ್ಷೆಯನ್ನು ನಡೆಸಿತ್ತು. ಸೆಷನ್-2ರ ಪತ್ರಿಕೆ-1ರ ಪರೀಕ್ಷೆಯು ಏ.2ರಿಂದ 8ರವರೆಗೆ ನಡೆಸಲಾಗಿತ್ತು. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 10,61,840 ಅಭ್ಯರ್ಥಿಗಳಲ್ಲಿ 9,92,350 ಹಾಜರಾಗಿದ್ದರು.
ದೇಶದ ವಿವಿಧ 300 ನಗರಗಳ 531 ಪರೀಕ್ಷಾ ಕೇಂದ್ರಗಳು, ದುಬೈ, ಸಿಂಗಾಪೂರ ಸೇರಿ ಹೊರ ದೇಶದ 15 ನಗರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕನ್ನಡವೂ ಸೇರಿ ದೇಶದ ವಿವಿಧ 13 ಭಾಷೆಗಳಲ್ಲಿ ಪರೀಕ್ಷೆ ನಡೆಯಿತು.
ಕುಶಾಗ್ರ ಮೂಲತಃ ಖಾನ್‌ಪುರದವರು. ಆದರೆ, ಬೆಂಗಳೂರಿನಲ್ಲೇ ವ್ಯಾಸಂಗ ಮುಂದುರಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.99.93 ಅಂಕಗಳಿಸಿದ್ದರು. ಐಸಿಎಸ್‌ಇ ಪಠ್ಯಕ್ರಮದಲ್ಲಿ ರಾಜ್ಯದ 3ನೇ ಟಾಪರ್ ಆಗಿದ್ದರು. ಇವರ ತಂದೆ ಅಮಿತ್ ಕುಮಾರ್ ಗುಪ್ತಾ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ತಾಯಿ ಮಧುಮಿತ ಗುಪ್ತಾ ವೈದ್ಯರಾಗಿದ್ದಾರೆ.
ನನ್ನ ಉದ್ದೇಶ ಸತತ ಪ್ರಯತ್ನದಿಂದ ಲಿತಾಂಶವನ್ನು ಉತ್ತಮ ಪಡಿಸಿಕೊಳ್ಳುವುದೇ ಹೊರತು ನನ್ನ ರ‌್ಯಾಂಕ್ ಪಡೆಯುವುದಾಗಿರಲಿಲ್ಲ. ಹೀಗಾಗಿ, ಸಾಕಷ್ಟು ಪ್ರಶ್ನಾ ಕೋಶವನ್ನು ಓದುತಿದ್ದೆ. ಐಐಟಿ ಬಾಂಬೆಯಲ್ಲಿ ಸೀಟು ಸಿಗುವ ಸಾಧ್ಯತೆ ಇದೆ. ಓದಿನ ಒತ್ತಡದಿಂದ ಹೊರ ಬರಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. 11ನೇ ತರಗತಿಯಲ್ಲಿದ್ದಾಗ ನನಗೆ ಇಂಜಿನಿಯರ್ ಆಗಬೇಕೆಂಬ ಆಸೆ ಹೆಚ್ಚಾಯಿತು. ಅದನ್ನೇ ಮುಂದುವರಿಸುವ ಗುರಿ ಹೊಂದಿದ್ದೇನೆ. - ಕುಶಾಗ್ರ ಗುಪ್ತಾ, ಜೆಇಇ ಮೇನ್ಸ್ ರಾಜ್ಯದ ಟಾಪರ್