ಇಂಜಿನಿಯರಿಂಗ್​ ಆಕಾಂಕ್ಷಿಗಳೇ ಗಮನಿಸಿ, ಜೂನ್​ನಲ್ಲಿ ಜೆಇಇ ಮೇನ್​

JEE main
Published on

ನವದೆಹಲಿ: ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್​ ಕಾಲೇಜು ಹಾಗೂ ಐಐಟಿ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ಜಾಯಿಂಟ್​ ಎಂಟ್ರೆನ್ಸ್​ ಎಕ್ಸಾಂ- ಮೇನ್​ ( ಜೆಇಇ) ಪರೀಕ್ಷೆಯನ್ನು ಜೂನ್​ನಲ್ಲಿ ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಕ್ರಿಯಾಲ್​ ತಿಳಿಸಿದ್ದಾರೆ.

ಲಾಕ್​ಡೌನ್​ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಿಸಿದ ಕಾರಣದಿಂದಾಗಿ ಪರೀಕ್ಷೆಯನ್ನು ಅನಿವಾರ್ಯವಾಗಿ ಜೂನ್​ಗೆ ಮುಂದೂಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಅಂತಿಮ ದಿನಾಂಕವನ್ನು ನಿಗದಿಪಡಿಸುವ ಮುನ್ನ, ವಿವಿಧ ರಾಜ್ಯಗಳ ಶಿಕ್ಷಣ ಮಂಡಳಿಗಳು, ಐಐಟಿ ಸಂಸ್ಥೆಗಳು ಸಂಬಂಧಪಟ್ಟ ಇತರರೊಂದಿಗೆ ಚರ್ಚಿಸಲಾಗುವುದು. ಬಳಿಕ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಪೋಕ್ರಿಯಾಲ್​ ಹೇಳಿದ್ದಾರೆ.

ಜೆಇಇ ಮೇನ್​ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ) ಈ ಮೊದಲು ಏಪ್ರಿಲ್​ 5, 7, 9 ಹಾಗೂ 11ರಂದು ಪರೀಕ್ಷೆ ನಡೆಸುವುದಾಗಿ ದಿನಾಂಕ ಪ್ರಕಟಿಸಿತ್ತು. ಬಳಿಕ ಲಾಕ್​ಡೌನ್​ ಹಿನ್ನೆಲೆ ಮೇ ಅಂತ್ಯಕ್ಕೆ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಎರಡನೇ ಹಂತದ ಲಾಕ್​ಡೌನ್​ ಹಿನ್ನೆಲೆ ಜೂನ್​ನಲ್ಲಿ ನಡೆಸುವುದಾಗಿ ಸಚಿವರು ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net