ದಾಖಲೆ ಮೊತ್ತಕ್ಕೆ ಹರಾಜಾಯ್ತು 142 ವರ್ಷಗಳ ಹಳೆಯ ಜೀನ್ಸ್ ಪ್ಯಾಂಟ್; ಇಷ್ಟೊಂದು ಬೆಲೆಯಾ ಎಂದ ನೆಟ್ಟಿಗರು!

Jeens Pant
Published on

ಅಮೇರಿಕಾ: ಹರಾಜು ಪ್ರಕ್ರಿಯೆ ನಡೆದಾಗ ಯಾವ ವಸ್ತು ಎಷ್ಟು ಬೆಲೆಗೆ ಮಾರಾಟವಾಗುತ್ತದೆ ಎಂಬುವುದನ್ನು ಊಹಿಸಲೂ ಸಾಧ್ಯವಿಲ್ಲ. ಈ ವಸ್ತು ದೊಡ್ಡ ಮೊತ್ತದಲ್ಲಿ ಹರಾಜಾಗುತ್ತದೆ ಎಂದುಕೊಂಡಿದ್ದರೆ ಲೆಕ್ಕಾಚಾರಾವೇ ತಲೆಕೆಳಗಾಗುವ ಸಾಧ್ಯತೆ ಇರುತ್ತದೆ. ಇದೀಗ ಇಂತದ್ದೇ ಪ್ರಸಂಗವೊಂದು ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ ನಡೆದಿದೆ.

ಹೌದು, ಇದೀಗ 1880ರ ಕಾಲದ ಜೀನ್ಸ್​ ಪ್ಯಾಂಟ್​ ಆಶ್ಚರ್ಯಕರ ಮೊತ್ತಕ್ಕೆ ಹರಾಜಾಗಿದೆ. 142 ವರ್ಷ ಹಳೆಯದಾದ ಜೀನ್ಸ್​ಪ್ಯಾಂಟ್ 62 ಲಕ್ಷಕ್ಕೆ ಹರಾಜಾಗಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗುತ್ತಿದ್ದಂತೆ, ಹರಾಜಿನಲ್ಲಿ ಭಾಗವಹಿಸಿದ್ದ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ.

ಸ್ಯಾನ್​​ ಡಿಯಾಗೋದಲ್ಲಿ 23 ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಕೈಲ್​​ ಹಾಪರ್ಟ್​​ ಎಂಬುವರು ಇಷ್ಟು ದೊಡ್ಡ ಮೊತ್ತ ನೀಡಿ 1880ರ ಕಾಲದ ಜೀನ್ಸ್ ಪ್ಯಾಂಟ್ ಕೊಂಡುಕೊಂಡಿದ್ದಾರೆ. ಈ ಜೀನ್ಸ್​ ಪ್ಯಾಂಟನ್ನು ಹರಾಜಿನಲ್ಲಿ ಪಡೆದುಕೊಂಡು ಆಶ್ಚರ್ಯಚಕಿತನಾಗಿದ್ದೇನೆ ಎಂದು ಕೈಲ್ ಹಾಪರ್ಟ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net