ಬಿಹಾರ ಚುನಾವಣೆ: ಜೆಡಿಯು ನಿತೀಶ್ ಕುಮಾರ್ ನಿಯಂತ್ರಣದಲ್ಲಿಲ್ಲ; ರಾಘೋಪುರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ತೇಜಸ್ವಿ ಯಾದವ್ ಹೇಳಿಕೆ | Tejashwi Yadav

ವಿಜಯವಾಣಿ (49)
Published on

Hajipur: ಮುಂದಿನ ತಿಂಗಳು ನ. 06 ಮತ್ತು 10ರಂದು ಎರಡು ಹಂತಗಳಲ್ಲಿ ನಡೆಯುವ ಬಿಹಾರ ಚುನಾವಣೆ ಕಣ ರಂಗೇರುತ್ತಿದ್ದು, ಇಂದು ಬುಧವಾರ(ಅ. 15) ಆರ್​ಜೆಡಿ ನಾಯಕ ಮತ್ತು ವಿಪಕ್ಷ ನಾಯಕ ತೇಜಸ್ವಿ ಯಾದವ್(Tejashwi Yadav) ರಾಘೋಪುರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ತೇಜಸ್ವಿ ಯಾದವ್, ಸದ್ಯ ಅಧಿಕಾರದಲ್ಲಿರುವ ಜೆಡಿಯು ಪಕ್ಷ ಸಿಎಂ ನಿತೀಶ್ ಕುಮಾರ್ ಅವರ ನಿಯಂತ್ರಣದಲ್ಲಿಲ್ಲ. ಬಿಜೆಪಿ ಖರೀದಿಸಿದ ಮೂವರು ಜೆಡಿಯು ನಾಯಕರು ಪಕ್ಷವನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಜೆಡಿಯು ನಾಯಕರಾದ ಲಾಲನ್ ಸಿಂಗ್, ಸಂಜಯ್ ಝಾ ಹಾಗೂ ವಿಜಯ್ ಚೌಧರಿ ಜೆಡಿಯು ಅನ್ನು ನಡೆಸುತ್ತಿದ್ದಾರೆ. ಈ ಮೂವರು ಬಿಜೆಪಿಗೆ ಮಾರಾಟವಾಗಿದ್ದಾರೆ. ಜೊತೆಗೆ ನಿತೀಶ್ ಕುಮಾರ್ ಅವರನ್ನು ನಾಶಮಾಡಿದ್ದಾರೆ ಎಂದಿದ್ದಾರೆ. ಇಂದು ಬೆಳಿಗ್ಗೆ ಜೆಡಿಯು ಬಿಹಾರ ವಿಧಾನಸಭಾ ಚುನಾವಣೆಗೆ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಹಾನಾರ್‌ನಿಂದ ಜೆಡಿಯು ರಾಜ್ಯ ಅಧ್ಯಕ್ಷ ಉಮೇಶ್ ಖುಷ್ವಾಹ, ನಳಂದದಿಂದ ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಹಾಗೂ ಭೋರೆಯಿಂದ ಸುನಿಲ್ ಕುಮಾರ್ ಮತ್ತು ಇತರ ಹಲವಾರು ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net