

ಕೆ.ಆರ್. ಮಾರುಕಟ್ಟೆ ಬಳಿಯ ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ ಈ ಕ್ಯಾಂಟೀನ್ ಗೆ ಚಾಲನೆ ನೀಡಲಾಯಿತು. ಜೆಡಿಎಸ್ ನ ಪ್ರಮುಖ ಮುಖಂಡರ ಸಹಯೋಗದಲ್ಲಿ ಈ ಕ್ಯಾಂಟೀನ್ ಆರಂಭಗೊಂಡಿದ್ದು, ಕರೊನಾ ಸಂಕಷ್ಟ ಕಾಲದಲ್ಲಿ, ಅದರಲ್ಲೂ ಪ್ರಮುಖವಾಗಿ ಲಾಕ್ ಡೌನ್ ನಿಂದ ತೊಂದರೆಯಲ್ಲಿರುವರ ಹಸಿವು ನೀಗಿಸಲಿದೆ.
ಬೆಂಗಳೂರು; ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಜೆಡಿಎಸ್ ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಟಿ.ಎ. ಶರವಣ 'ದೇವೇಗೌಡ ಸಂಚಾರಿ ಅಪ್ಪಾಜಿ ಕ್ಯಾಂಟೀನ್' ಪ್ರಾರಂಭಿಸಿದ್ದಾರೆ.
ಕ್ಯಾಂಟೀನ್ ಶುಭಾರಂಭ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಟಿ.ಎ.ಶರವಣ, ದೇವೇಗೌಡರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಬಾರದು. ನೊಂದವರು, ಬಡವರಿಗೆ ನೆರವಾಗುವಂತೆ ಸೂಚನೆ ನೀಡಿದ್ದರು. ಅವರ ಆಶಯದಂತೆ ಈ ಸಂಚಾರಿ ಕ್ಯಾಂಟೀನ್ ಮೂಲಕ ಮನೆ ಬಾಗಿಲಿಗೆ ಊಟ ಒದಗಿಸಲಾಗುತ್ತಿದೆ. ಊಟದ ಪ್ಯಾಕೆಟ್ ಜತೆಗೆ ನೀರು, ಮುಖಗವಸು ಸಹ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಮುಂಚೆ ಬಸವನ ಗುಡಿಯಲ್ಲಿ ಅಪ್ಪಾಜಿ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿತ್ತು. ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಇದೇ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಸಂಚಾರಿ ಕ್ಯಾಂಟೀನ್ ಮೂಲಕ ಸೇವೆ ಒದಗಿಸುತ್ತಿದ್ದೇವೆ. ಅಗತ್ಯ ಇರುವವರು ಮುಂಚೆಯೇ ಬೇಡಿಕೆ ಸಲ್ಲಿಸಿದರೆ ಅಗತ್ಯಕ್ಕೆ ತಕ್ಕಂತೆ ಊಟ ಪೂರೈಸುತ್ತೇವೆ ಎಂದರು. ಹಸಿದವರ ಬಳಿಗೆ ತೆರಳಿ ಉಚಿತವಾಗಿ ಆಹಾರ ವಿತರಣೆಗೆ ಮೊ. 9900431581 ಸಂಪರ್ಕಿಸಬಹುದು ಎಂದು ಹೇಳಿದರು.