

ಹಾಸನ: ಜೆಡಿಎಸ್ ಮಾಜಿ ಸಚಿವ ಜಿ.ಟಿ.ದೇವೇಗೌಡರು ಪ್ರಧಾನಿ ಮೋದಿ ಪರ ಮಾತನಾಡುವುದು ಹೊಸದಲ್ಲ. ಈ ಹಿಂದೆ ಹಲವು ಬಾರಿ ಅವರು ಬಿಜೆಪಿ, ಮೋದಿಯನ್ನು ಹೊಗಳಿದ್ದಿದೆ. ಆದರೆ ಈಗ ಇದೇ ವಿಚಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿ.ಟಿ.ದೇವೇಗೌಡರು ಇಲ್ಲೂ ಇದ್ದು, ಅಲ್ಲಿಯೂ ಇರುವ ಕೆಲಸ ಮಾಡುವುದು ಬೇಡ. ಇದು ಅಶಿಸ್ತಿನ ಪರಮಾವಧಿ, ಅವರು ಸ್ಪಷ್ಟ ನಿಲುವು ತಾಳಲಿ. ಮನಸಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಪಕ್ಷಕ್ಕೆ ಮುಜುಗರ ಆಗಿದೆ. ಅವರ ನಡವಳಿಕೆ ಗಮನಿಸುತ್ತಿದ್ದೇನೆ. ಮೊದಲು ಅಲ್ಲಿ ಮನಸಿತ್ತು, ದೇಹ ಇಲ್ಲಿಯೇ ಇತ್ತು. ಈಗ ದೇಹ ಮತ್ತು ಮನಸು ಎರಡೂ ಬಿಜೆಪಿ ಜತೆಯೇ ಇದೆ. ಹೀಗಾದರೆ ಖಂಡಿತ ವಾರ್ನ್ ಮಾಡುತ್ತೇನೆ. ನಿಷ್ಠೆಯಿಂದ ಇರುವುದಾದರೆ ಪಕ್ಷದಲ್ಲಿ ಇರಬಹುದು ಎಂದು ಕುಮಾರಸ್ವಾಮಿ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಎಂಎಲ್ಸಿ ಚುನಾವಣೆಯಲ್ಲಿ ಗುಪ್ತಮತದಾನ ಇತ್ತು. ಆದರೆ ವಿಪ್ ನೀಡಿರಲಿಲ್ಲ. ಮುಂದಿನ ರಾಜ್ಯಸಭಾ ಚುನಾವಣೆಯಲ್ಲಿ ಕಾನೂನು ಕೈಗೊಳ್ಳಲಾಗುವುದು ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)