ನಾಳೆಯಿಂದ ಜೆಸಿಐ ಸಪ್ತಾಹ ಆರಂಭ

jci
Published on

ಶಿವಮೊಗ್ಗ: ನಗರದ ಎಲ್ಲ ಜೆಸಿಐ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಸೆ. 9ರಿಂದ ಸಂಜೆ 15ರವರೆಗೆ ಜೆಸಿಐ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಐ ಸೆನೆಟರ್ ಸಿ.ಎ.ಗೌರೀಶ್ ಭಾರ್ಗವ ಹೇಳಿದರು.

ಜೆಸಿಐ ಭಾರತ ವಲಯ-24ರ ಜೆಸಿಐ ಸಪ್ತಾಹಕ್ಕೆ ನಗರದ ಎಲ್ಲ ಘಟಕಗಳು ಕೈಜೋಡಿಸುತ್ತಿವೆ. ಒಳಾಂಗಣ ಕ್ರೀಡೆ, ಆರೋಗ್ಯ ತಪಾಸಣೆ, ವಾಕಾಥಾನ್, ಮ್ಯಾರಾಥಾನ್, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಪ್ತಾಹದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ. 9ರ ಬೆಳಗ್ಗೆ 8ಕ್ಕೆ ನೆಹರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತಾಹಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಚಾಲನೆ ನೀಡುವರು ಎಂದರು.

ಜೆಸಿಐ ಭಾವನಾ ಅಧ್ಯಕ್ಷೆ ರೇಖಾ ರಂಗನಾಥ್ ಮಾತನಾಡಿ, ಕೌಶಲಾಧಾರಿತ ಕಾರ್ಯಾಗಾರ, ಮಾನವ ಕರ್ತವ್ಯಗಳ ಅರಿವು, ಸಹಿ ಅಭಿಯಾನ, ಕಾಲೇಜು, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಅಭಿಯಾನ, ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ಮುಂತಾದವುಗಳನ್ನು ನಿಗದಿತ ಜೆಸಿ ಘಟಕಗಳು ನಡೆಸಿಕೊಡಲಿವೆ ಎಂದು ತಿಳಿಸಿದರು.

ಸೆ.10ರ ಬೆಳಗ್ಗೆ ಜೆಸಿಐ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಬ್ಯಾಡ್ಮಿಂಟನ್, ಕೇರಂ, ಚೆಸ್ ಹಾಗೂ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜೆಸಿಐ ಸಪ್ತಾಹ ಸೆ.15ರಂದು ಭವ್ಯ ಆಚರಣೆ ಮೂಲಕ ಮುಕ್ತಾಯವಾಗುತ್ತದೆ ಎಂದರು. ಶಿವಮೊಗ್ಗದ ವಿವಿಧ ಘಟಕಗಳ ಜೆಸಿಐ ಅಧ್ಯಕ್ಷರಾದ ಸ್ಮಿತಾ ಮೋಹನ್, ಶಿಲ್ಪಾ, ರುದ್ರೇಶ್ ಕೋರಿ, ಗಣೇಶ್ ಪೈ, ವಿ.ಗಣೇಶ್, ಸಂತೋಷ್, ನಿವೇದಿತಾ ವಿಕಾಸ್, ಮಂಜುಳಾ ಕೇಶವ್, ನರಸಿಂಹಣ್ಣ, ಶಿಲ್ಪಾ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net