ಜೆಸಿಐ ಶಿವಮೊಗ್ಗ ರಾಯಲ್ ವರ್ಲ್ಡ್ ರೆಕಾರ್ಡ್ ಸೇರ್ಪಡೆ

sudharshan tayimane
ಜೆಸಿಐ ಶಿವಮೊಗ್ಗ ರಾಯಲ್ ಘಟಕದ ಅಧ್ಯಕ್ಷ ಸುದರ್ಶನ್ ತಾಯಿಮನೆ
Published on

ಶಿವಮೊಗ್ಗ: ನೋಬೆಲ್ ವರ್ಲ್ಡ್ ರೆಕಾರ್ಡ್ ಶಿವಮೊಗ್ಗದಿಂದ ಆಯೋಜಿಸಿದ್ದ ಅಫಿಷಿಯಲ್ ರೆಕಾರ್ಡ್ ಅಟೆಂಪ್ಟ್‌ನಲ್ಲಿ ಜೆಸಿಐ ಶಿವಮೊಗ್ಗ ರಾಯಲ್ ಘಟಕವು ನೋಬೆಲ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ ಎಂದು ಘಟಕದ ಅಧ್ಯಕ್ಷ ಸುದರ್ಶನ್ ತಾಯಿಮನೆ ಹೇಳಿದರು.

ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಪಡೆಯಲು ಶಿವಮೊಗ್ಗದ ರಾಯಲ್ ಘಟಕ ಹಾಗೂ ಎಲ್ಲ ಜೆಸಿ ಘಟಕಗಳು 2024ರ ಮೇ 24 ರಂದು ರಾಷ್ಟ್ರೀಯ ತರಬೇತಿ ದಿನದ ಅಂಗವಾಗಿ ಸತತ 24ಗಂಟೆ, 24 ವಿಷಯ ಹಾಗೂ 24 ತರಬೇತುದಾರರನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
23ರ ರಾತ್ರಿ 12 ಗಂಟೆಗೆ ಪ್ರಾರಂಭವಾದ ಈ ಕಾರ್ಯಾಗಾರ ಮರುದಿನ ಮಧ್ಯರಾತ್ರಿ 12ಗಂಟೆ ವರೆಗೆ ನಿರಂತರವಾಗಿ ನೋಬೆಲ್ ವರ್ಲ್ಡ್ ರೆಕಾರ್ಡ್‌ನ ರಾಜ್ಯ ಪ್ರಮುಖ ಕೃಷ್ಣಮೂರ್ತಿ ಸಮ್ಮುಖದಲ್ಲಿ ನಡೆದಿತ್ತು. ಈಗ ಈ ರೆಕಾರ್ಡ್ಸ್ ಅನ್ನು ಜೆಸಿಐ ಶಿವಮೊಗ್ಗ ರಾಯಲ್ ಘಟಕ ಪಡೆದಿದೆ. ಇದು ನಮ್ಮ ಹೆಮ್ಮೆಯಾಗಿದೆ ಎಂದರು.
ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಎಂಬುದು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾಹಿತಿ ಪಡೆದಿದ್ದು, ಶಿವಮೊಗ್ಗದಲ್ಲೂ ಕಚೇರಿ ಹೊಂದಿದೆ. ಈ ರೆಕಾರ್ಡ್ಸ್ ನಿಂದ ಪ್ರೇರಿತರಾದ ನಾವು ಮುಂದೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೂ ಪ್ರಯತ್ನಿಸುತ್ತೇವೆ ಎಂದರು. ನೋಬೆಲ್ ವರ್ಲ್ಡ್ ರೆಕಾರ್ಡ್‌ನ ಜಿಲ್ಲಾಧ್ಯಕ್ಷ ಶಿವಮೊಗ್ಗ ವಿನೋದ್ ಅವರಿಂದ ಸುದರ್ಶನ್ ತಾಯಿಮನೆ ಹಾಗೂ ಜೆಸಿಐ ಪದಾಧಿಕಾರಿಗಳು ನೋಬೆಲ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರ ಹಾಗೂ ಪದಕ ಪಡೆದರು. ಪ್ರಮುಖರಾದ ಗೌರೀಶ್ ಭಾರ್ಗವ್, ಮೋಹನ್, ನವೀನ್ ತಲಾರಿ, ಆದರ್ಶ್, ನರಸಿಂಹಮೂರ್ತಿ, ಸಂಜಯ್, ಶೋಭಾ ಸತೀಶ್, ಸ್ಮಿತಾ ಮೋಹನ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net