ಬಾಕಿ ಹಣ ಬಿಡುಗಡೆಗೆ ಲಂಚ ಕೊಡಿ! ಪುರಸಭೆ ಕಚೇರಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಸಾಯಲು ಯತ್ನಿಸಿದ ಜೆಸಿಬಿ ಮಾಲೀಕ

Bribe
Published on

ತಮಿಳುನಾಡು: ಲಂಚ ನೀಡಿಲ್ಲವೆಂದು ಬಾಡಿಗೆ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದ ಪೌರಾಯುಕ್ತನ ವಿರುದ್ಧ ಅಸಮಾಧಾನಗೊಂಡ ಜೆಸಿಬಿ ಮಾಲೀಕನೊಬ್ಬ ಪುರಸಭೆ ಕಚೇರಿಯೊಳಗೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ತಿರುವರೂರು ಜಿಲ್ಲೆಯಲ್ಲಿ ನಡೆದಿದೆ.

ಜೆಸಿಬಿ ಕೆಲಸದ ಹಣ ಪಾವತಿಸದೆ ಪುರಸಭೆ ಅಧಿಕಾರಿಗಳು ಸತಾಯಿಸುತ್ತಿದ್ದರು. ಬಾಕಿ ಹಣ ಬಿಡುಗಡೆ ಮಾಡಲು ಪೌರಾಯುಕ್ತ ಎಸ್.ಕುಮಾರಿಮನ್ನನ್ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಕೋಪಗೊಂಡ ಜೆಸಿಬಿ ಮಾಲೀಕ ವಿಜಯರಾಘವನ್ ಅವರು ಕೂತನಲ್ಲೂರು ಪುರಸಭೆಯ ಕಚೇರಿಯೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ತಮಿಳುನಾಡು ಸ್ಥಳೀಯ ಸಂಸ್ಥೆಗಳ ಒಂಬುಡ್ಸ್‌ಮನ್, ವಿಜಯರಾಘವನ್ ಸೇರಬೇಕಾಗಿದ್ದ ಬಾಕಿಯನ್ನು ಹಣವನ್ನು ಆಯುಕ್ತರಿಂದ ವಸೂಲಿ ಮಾಡಿದ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಸೂಚನೆ ನೀಡಿದ್ದಾರೆ.

ವಿಜಯರಾಘವನ್ ತನಗೆ ಸೇರಬೇಕಾಗಿದ್ದ ಬಾಕಿ ಹಣ ಕೇಳಲು ಹೋದಾಗ ಅಧಿಕಾರಿಗಳು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬ ಸಮೇತ ಕೂತನಲ್ಲೂರು ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಎಲ್ಲಾ ಘಟನೆಯ ನಂತರ ಪಾಲಿಕೆ ಆಯುಕ್ತ ಕುಮಾರಿಮನ್ನನ್ ಅಮಾನತುಗೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net