ಶಬರಿಮಲೆ ಮೇಲ್ಶಾಂತಿಯಾಗಿ ಜಯರಾಜನ್​ ಪೊಟ್ಟಿ ನೇಮಕ

Sabarimala
Published on

ಪತ್ತನಂತಿಟ್ಟ : ಶಬರಿಮಲೆಯ ವಾರ್ಷಿಕ ಜಾತ್ರೆಗೆ ಸಿದ್ಧತೆಗಳು ಆರಂಭವಾಗಿದೆ. ಮುಂದಿನ ತಿಂಗಳು ಮಂಡಲಪೂಜೆಯೊಂದಿಗೆ ಕಾರ್ಯಕ್ರಮಗಳು ಶುರುವಾಗಲಿವೆ. ವಾಡಿಕೆಯಂತೆ ಒಂದು ವರ್ಷದ ಅವಧಿಗೆ ಶಬರಿಮಲೆ ಸನ್ನಿದಾನದ ಮೇಲ್ಶಾಂತಿಯ ಆಯ್ಕೆ ನಡೆದಿದ್ದು, ಈ ಬಾರಿ ವಿ.ಕೆ.ಜಯರಾಜನ್​ ಪೊಟ್ಟಿ ಮೇಲ್ಶಾಂತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಮಂಡಲ ಪೂಜೆಗೆ ಸನ್ನಿದಾನ ತೆರೆದುಕೊಳ್ಳುವ ನವೆಂಬರ್ 16 ರಿಂದ ಒಂದು ವರ್ಷದ ಅವಧಿಗೆ ಸನ್ನಿದಾನದಲ್ಲಿ ಪೂಜೆ ಸಲ್ಲಿಸುವ ಹೊಣೆಗಾರಿಕೆ ಜಯರಾಜನ್ ಅವರದ್ದು. ಮಾಳಿಗಪುರತ್ತಮ ದೇವಿ ಮಂದಿರದ ಪ್ರಧಾನ ಅರ್ಚಕರಾಗಿ ರಜಿಕುಮಾರ್ ಎಂ.ಎನ್​. ನಂಬೂದಿರಿ ನೇಮಕವಾಗಿದ್ದಾರೆ.

ತಿರುವಾಂಕೂರು ದೇವಸ್ವಂ ಮಂಡಳಿ ಅರ್ಚಕರ ಹೆಸರುಗಳ ಪಟ್ಟಿಯಿಂದ ಕೆಲವರನ್ನು ಆಯ್ಕೆ ಮಾಡಿ ಸಂದರ್ಶನ ನಡೆಸಿದ ಬಳಿಕ ಅವರಿಗೆ ಈ ಹೊಣೆಗಾರಿಕೆ ವಹಿಸಲಾಗುತ್ತದೆ. ಮಲಯಾಳಂ ಕ್ಯಾಲೆಂಡರ್​ನ ವೃಶ್ಚಿಕ ತಿಂಗಳಲ್ಲಿ ಆರಂಭವಾಗುವ 41 ದಿನಗಳ ಮಂಡಲ ಪೂಜೆ ಸೀಸನ್ ಶುರುವಾಗುವುದರೊಂದಿಗೆ ಇವರ ಹೊಣೆಗಾರಿಕೆಯ ಅವಧಿಯೂ ಶುರುವಾಗುತ್ತದೆ ಎಂದು ಮಂಡಳಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net