2004ರಲ್ಲಿ ಜಯಂತಿ ಬರ್ಬರ ಹತ್ಯೆ! ಪತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ ಕೋರ್ಟ್​ | Murder

ವಿಜಯವಾಣಿ - 2024-12-07T165923.290
Published on

ಕೇರಳ: ಏಪ್ರಿಲ್​ 2, 2024ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ (Murder) ಮಾಡಿ ಪೊಲೀಸರ ಕಣ್ಣಿನಿಂದ ತಲೆಮರಿಸಿಕೊಂಡಿದ್ದ ಪತಿಗೆ ಇದೀಗ ಕೋರ್ಟ್​ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಜಾಮೀನಿನ ಮೇರೆಗೆ ಬಿಡುಗಡೆ

ತನ್ನ ಹೆಂಡತಿಯ ಮೇಲೆ ಅನುಮಾನ ಹೊಂದಿದ್ದ ಪತಿ ಕುಟ್ಟಿಕೃಷ್ಣನ್, ಆ ದಿನ ಚಾಕು, ಉಳಿ ಮತ್ತು ಸುತ್ತಿಗೆ ಬಳಸಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದಿದ್ದ. ಕೊಲೆಗೈದ ನಂತರ ಜಯಂತಿಯ ತಲೆಯನ್ನು ಕತ್ತರಿಸಿ, ಘಟನೆ ಬಗ್ಗೆ ನನಗೆ ಏನು ಮಾಹಿತಿ ಇಲ್ಲ ಎಂದು ಪೊಲೀಸರಿಗೆ ಹೇಳಿದ್ದ. ಹತ್ಯೆ ನಡೆದ ಒಂದು ವಾರದಲ್ಲಿ ಆರೋಪಿ ಕುಟ್ಟಿಕೃಷ್ಣನ್​ನನ್ನು ಬಂಧಿಸಿದ್ದ ಪೊಲೀಸರು, ನಂತರ ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಿದ್ದರು. ಆದರೆ, ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಖಾಕಿ ಪಡೆಗೆ ಕಡೆಗೂ ಬಲವಾದ ಸಾಕ್ಷಿಗಳು ಲಭಿಸಿವೆ.

ಕೈವಾಡ ಶಂಕೆ

ಆರಂಭದ ದಿನಗಳಲ್ಲಿ ತನ್ನದೇನು ತಪ್ಪಿಲ್ಲ, ಪತ್ನಿಯನ್ನು ಯಾರೋ ಕೊಲೆ ಮಾಡಿ ಹೋಗಿದ್ದಾರೆ ಎಂದು ದೂರು ಕೊಟ್ಟಿದ್ದ ಕುಟ್ಟಿಕೃಷ್ಣನ್​, ಜಾಮೀನು ಪಡೆದು ಹೋದರೂ ಸಹ ಪೊಲೀಸರು ಕೊಲೆಯಲ್ಲಿ ಆತನ ಕೈವಾಡ ಇರುವುದನ್ನು ಶಂಕಿಸಿದ್ದರು. ಸುದೀರ್ಘ ತನಿಖೆಯಲ್ಲಿ ಕುಟ್ಟಿಕೃಷ್ಣನ್ ಕೊಲೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

2 ದಶಕಗಳ ಹಿಂದಿನ ಕೇಸ್​

ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಆರೋಪಿಯನ್ನು 2023ರಲ್ಲಿ ಮತ್ತೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ವಿ. ಸಂತೋಷ್ ಕುಮಾರ್ ಅವರು ಪ್ರಾಸಿಕ್ಯೂಷನ್ ಪರವಾಗಿ ಹಾಜರಾಗಿ ಎರಡು ದಶಕಗಳ ಹಿಂದೆ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಪ್ರಕರಣಕ್ಕೆ ನ್ಯಾಯವನ್ನು ಒದಗಿಸುವಲ್ಲಿ ಮೇಲುಗೈ ಸಾಧಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net