ಬಿಲ್ಲವ ಮಹಾಮಂಡಲದ ಜಯ ಸಿ.ಸುವರ್ಣ ಇನ್ನಿಲ್ಲ

WhatsApp Image 2020-10-21 at 7.00.56 AM
Published on

ಮಂಗಳೂರು: ಬಿಲ್ಲವ ಭವನ ಮುಂಬಯಿ ಮತ್ತು ಮಹಾಮಂಡಲ ಭವನ ಮೂಲ್ಕಿ ಇದರ ನಿರ್ಮಾತೃ ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷರು ಜಯ ಸಿ. ಸುವರ್ಣ(75) ಮಂಗಳವಾರ ತಡರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಮೃತರಾದರು. ಅವರು ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ.

ಬಿಲ್ಲವ ಸಮುದಾಯದ ಸುಧಾರಣೆಗೆ ಬಹಳಷ್ಟು ಶ್ರಮಿಸಿದ್ದ ಸುವರ್ಣ, ಭಾರತ್‌ ಸಹಕಾರಿ ಬ್ಯಾಂಕ್‌ ಸ್ಥಾಪಕರೂ ಆಗಿದ್ದರು. ಮೂಲತಃ ಮೂಲ್ಕಿಯ ಅಡ್ವೆಯವರಾಗಿದ್ದು ಚಿಕ್ಕಂದಿನಲ್ಲೇ ಮುಂಬೈಗೆ ತೆರಳಿ ತಮ್ಮ ಶ್ರಮದಿಂದ ಹೋಟೆಲ್‌ ಉದ್ಯಮ ಕಟ್ಟಿದವರು. ಮುಂಬೈನಲ್ಲಿ ಮಾತ್ರವಲ್ಲದೆ ಹಲವೆಡೆ ಬಿಲ್ಲವರ ಯೂನಿಯನ್‌ ಸ್ಥಾಪಿಸಿ ಏಳಿಗೆಗೆ ಕಾರಣರಾದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net