

ಶಾರುಖ್ ಖಾನ್ ಮತ್ತು ಅಟ್ಲಿ ಕುಮಾರ್ ಅಭಿನಯದ ಜವಾನ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಜವಾನ್ ಕೇವಲ ಮೂರೇ ದಿನಗಳಲ್ಲಿ 200 ಕೋಟಿ ರೂ.ಗೂ ಹೆಚ್ಚು ವ್ಯವಹಾರ ಮಾಡಿದೆ.
ಮೂರನೇ ದಿನದಲ್ಲಿ ದಾಖಲೆ ಮುರಿಯುವ ಗಳಿಕೆ ಮಾಡಿದೆ. ವರದಿಗಳ ಪ್ರಕಾರ, ಜವಾನ್ ಸಿನಿಮಾ ಶನಿವಾರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 74.5 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಈ ಪೈಕಿ ಹಿಂದಿಯಲ್ಲಿ 65.5 ಕೋಟಿ, ತಮಿಳಿನಲ್ಲಿ 5.5 ಕೋಟಿ, ತೆಲುಗಿನಲ್ಲಿ 4 ಕೋಟಿ ಬ್ಯುಸಿನೆಸ್ ಮಾಡಿದೆ.
‘ಜವಾನ್’ ಸಿನಿಮಾ ಸೋಮವಾರದ (ಸೆಪ್ಟೆಂಬರ್ 11) ಪರೀಕ್ಷೆಯಲ್ಲಿ ಪಾಸ್ ಆಗಿದೆ. ಈ ಚಿತ್ರ ವಾರದ ಮೊದಲ ದಿನ 30 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಅಬ್ಬರ ಮುಂದುವರಿದಿದೆ. ಮುಂದಿನ ವಾರ ಸಾಲು ಸಾಲು ರಜೆಗಳು ಬರುತ್ತಿವೆ. ಇದು ಚಿತ್ರತಂಡಕ್ಕೆ ಸಹಕಾರಿ ಆಗಲಿದೆ. ಈ ಚಿತ್ರ ಅನಾಯಾಸವಾಗಿ 500 ಕೋಟಿ ಕ್ಲಬ್ ಸೇರಲಿದೆ ಎಮಬ ಅಭಿಪ್ರಾತ ವ್ಯಕ್ತವಾಗಿದೆ.
ಆದರೆ, ಸೋಮವಾರ ಚಿತ್ರ ಎಷ್ಟು ಗಳಿಕೆ ಮಾಡಿತು ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ‘ಜವಾನ್’ ಸಿನಿಮಾ ವಾರದ ಮೊದಲ ದಿನವಾದ ಸೋಮವಾರ 30 ಕೋಟಿ ರೂಪಾಯಿ ಬಾಚಿಕೊಂಡು ನಿರ್ಮಾಪಕರ ಮೊಗದಲ್ಲಿ ನಗು ಮೂಡಿಸಿದೆ.
‘ಜವಾನ್’ ಸಿನಿಮಾ ಕಲೆಕ್ಷನ್ ವಿವರ:
ಸೆಪ್ಟೆಂಬರ್ 7: 75 ಕೋಟಿ ರೂಪಾಯಿ. (ಹಿಂದಿ 65 ಕೋಟಿ ರೂಪಾಯಿ. ತಮಿಳು-ತೆಲುಗು 10 ಕೋಟಿ ರೂಪಾಯಿ)
ಸೆಪ್ಟೆಂಬರ್ 8: 53.23ಕೋಟಿ ರೂಪಾಯಿ. (ಹಿಂದಿ 46.23 ಕೋಟಿ ರೂಪಾಯಿ. ತಮಿಳು-ತೆಲುಗು 7 ಕೋಟಿ ರೂಪಾಯಿ)
ಸೆಪ್ಟೆಂಬರ್ 9: 77.83 ಕೋಟಿ ರೂಪಾಯಿ. (ಹಿಂದಿ 68.72 ಕೋಟಿ ರೂಪಾಯಿ. ತಮಿಳು-ತೆಲುಗು 9.11 ಕೋಟಿ ರೂಪಾಯಿ)
ಸೆಪ್ಟೆಂಬರ್ 10: 80.1 ಕೋಟಿ ರೂಪಾಯಿ. (ಹಿಂದಿ 71.63 ಕೋಟಿ ರೂಪಾಯಿ. ತಮಿಳು-ತೆಲುಗು 8.47 ಕೋಟಿ ರೂಪಾಯಿ)
ಸೆಪ್ಟೆಂಬರ್ 11: 30 ಕೋಟಿ ರೂಪಾಯಿ. ಒಟ್ಟೂ ಕಲೆಕ್ಷನ್ 316 ಕೋಟಿ ರೂಪಾಯಿ.
ತಮಿಳು ಹಾಗೂ ತೆಲುಗು ವರ್ಷನ್ನಿಂದ 30 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 316 ಕೋಟಿ ರೂಪಾಯಿ ಆಗಿದೆ.