

ಉತ್ತರಪ್ರದೇಶ: ಚಿನ್ನದ ಪದಕ ವಿಜೇತ ಜಾವೆಲಿನ್ ಪಟು ನೀರಜ್ ಚೋಪ್ರಾ ಪ್ರತಿಮೆಯನ್ನು ಮೀರತ್ನಲ್ಲಿ ನಿಮಿರ್ಸಲಾಗಿದೆ. ಆದರೆ ಬೆಳಗಾಗುವುದರೊಳಗೆ ಈ ಪ್ರತಿಮೆ ಕೈಲಿದ್ದ ಜಾವೆಲಿನ್ (ಈಟಿ) ಮಂಗಮಾಯವಾಗಿದೆ. ಇದಕ್ಕೆ ಸಂಬಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶ್ವ ಅಥ್ಲೀಟ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು ನೀರಜ್ ಚೋಪ್ರಾ ಪ್ರತಿಮೆಯನ್ನು ಮೀರತ್ನಲ್ಲಿ ನಿರ್ಮಿಸಲಾಗಿತ್ತು. ಮೀರತ್ನ ಮಾರ್ಕೆಟ್ ಬಳಿ ನಿಮಿರ್ಸಿದ್ದ ಪ್ರತಿಮೆಗೆ ಚಿನ್ನದ ಬಣ್ಣ ಬಳಿಯಲಾಗಿದೆ. ಈ ಪ್ರತಿಮೆಯಲ್ಲಿದ್ದ ಜಾವೆಲಿನ್ನ್ನು ಮಧ್ಯರಾತ್ರಿ ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ಖಾಲಿ ಕೈಲಿ ನಿಂತಿರುವ ನೀರಜ್ ಚೋಪ್ರಾ ಪ್ರತಿಮೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
2020ರ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಬಳಿಕ ಇತ್ತೀಚೆಗೆ ನಡೆದ ವಿಶ್ವ ಅಥ್ಲೇಟ್ ಚಾಂಪಿಯನ್ಶಿಪ್ನಲ್ಲೂ ಗೆಲುವು ಸಾಧಿಸಿದ್ದರು. 88.17 ಮೀ. ದೂರ ಜಾವೆಲಿನ್ ಎಸೆದು ನೀರಜ್ ಚೋಪ್ರಾ ಮತ್ತೆ ಚಿನ್ನದ ಪದಕ ಗೆದ್ದಿದ್ದರು. ಅವರ ಈ ಸಾಧನೆಯನ್ನು ಪ್ರಶಂಸಿಸಲು ಚಿನ್ನದ ಬಣ್ಣದ ಪ್ರತಿಮೆ ನಿರ್ಮಿಸಲಾಗಿದೆ.