More

    ಬಾಯಿಯ ದುರ್ವಾಸನೆಯಿಂದ ಮುಜುಗರ ಉಂಟಾಗ್ತಿದ್ಯಾ? ಈ ಟಿಪ್ಸ್​ ಫಾಲೋ ಮಾಡಿ…

    ಬೆಂಗಳೂರು: ಎಷ್ಟೇ ಮುಂಜಾಗ್ರತೆ ವಹಿಸಿದರೂ ಬಾಯಿ ದುರ್ವಾಸನೆ ಸಮಸ್ಯೆ ಕೆಲವರಿಗೆ ಹೆಚ್ಚಾಗಿ ಕಾಡುತ್ತದೆ. ಇದರಿಂದಾಗಿ ಮಾತನಾಡಲು ಮುಜುಗರಪಡುತ್ತಾರೆ. ತಮ್ಮ ಬಾಯಿಯನ್ನು ಮೌತ್ ವಾಶ್‌ಗಳಿಂದ ಸ್ವಚ್ಛಗೊಳಿಸುತ್ತಾರೆ. ಆದರೂ ಈ ಸಮಸ್ಯೆಗೆ ಪರಿಹಾರವೇ ಸಿಗುವುದಿಲ್ಲ.

    ಮೌತ್ ವಾಶ್​​ನಲ್ಲಿರುವ ಸೋಡಿಯಂ ಲಾರಿಲ್ ಸಲ್ಫೇಟ್ ತಲೆನೋವಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಇದರಿಂದ ಹಾರ್ಮೋನ್ ಅಸಮತೋಲನದಂತಹ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇದೆ. ಆದ್ದರಿಂದ ಸಾಧ್ಯವಾದಷ್ಟು ಮನೆಮದ್ದುಗಳನ್ನು ಪ್ರಯತ್ನಿಸಿ. ಇವುಗಳು ಸಹ ಸಹಾಯ ಮಾಡದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ನಾವು ನಿಮಗೆ ಕೆಲವು ಮನೆ ಮದ್ದುಗಳ ಸಲಹೆ ನೀಡುತ್ತೇವೆ.

    ಇದನ್ನೂ ಓದಿ: ಕಾಫಿ ಪುಡಿಯಿಂದ ಫೇಶಿಯಲ್ ಮಾಡಿ..ನಿಮ್ಮ ಮುಖ ಸುಂದರವಾಗಿ ಹೊಳೆಯುತ್ತದೆ..

    1) ಮೌತ್ ​​ವಾಶ್‌ಗಳ ಬದಲಿಗೆ ತೆಂಗಿನಎಣ್ಣೆಯನ್ನು ಬಳಸುವುದು ಉತ್ತಮ. ತೆಂಗಿನಎಣ್ಣೆಯನ್ನು ಪ್ರತಿನಿತ್ಯ 4 ಅಥವಾ 5 ಹನಿಗಳನ್ನು ನೀರಿಗೆ ಹಾಕಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ.
    2) ನೀರು ಕುಡಿದಷ್ಟೂ ನಿಮ್ಮ ದೇಹಕ್ಕೆ ಒಳ್ಳೆಯದು. ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ಬ್ಯಾಕ್ಟೀರಿಯಾವನ್ನು ಸುಲಭವಾಗಿ ತೆಗೆದುಹಾಕಬಹುದು. ಇದರಿಂದ ವಾಸನೆ ಬಾಯಿಂದ ಬರುವುದಿಲ್ಲ.

    ಇದನ್ನೂ ಓದಿ: ದ್ರಾಕ್ಷಿ ಹಣ್ಣು ಈ 5 ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ…
    3) ಲವಂಗವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬಾಯಿ ದುರ್ವಾಸನೆ ಇರುವವರು ಲವಂಗವನ್ನು ಬಾಯಿಗೆ ಹಾಕಿಕೊಂಡು ಇರಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದಾಗಿದೆ.
    4) ಊಟದ ಬಳಿಕ ಒಂದು ಚಮಚ ಜೀರಿಗೆಯನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗೆಯುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.

    ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….
    5) ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿ. ಇದು ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.
    6) ಪ್ರತಿ ದಿನ ಬೆಳಗ್ಗೆ ಹಾಗೂ ರಾತ್ರಿ ಊಟದ ಬಳಿಕ ಹಲ್ಲುಜ್ಜಿ, ನಾಲಿಗೆ ಯನ್ನು ಶುಚಿಗೊಳಿಸುವುದರಿಂದ, ಬಾಯಿಯ ಆರೋಗ್ಯ ಹೆಚ್ಚಾಗಿ, ಬಾಯಿಯ ದುರ್ವಾಸನೆ ಸಮಸ್ಯೆ ನಿವಾರಣೆಯಾಗುತ್ತದೆ.

    ಗಮನಿಸಿ: ಮೇಲಿನ ಮಾಹಿತಿಯನ್ನು ಜನರ ಸಾಮಾನ್ಯ ಆರೋಗ್ಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನೀಡಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

    ನಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ…ಚರ್ಮದ ಆರೋಗ್ಯಕ್ಕೆ ಇದೆ ಹಲವಾರು ಪ್ರಯೋಜನ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts