ಚಿಕ್ಕದೇವಮ್ಮ ಜಾತ್ರೆ ಸಂಪನ್ನ

27 SARAG 2
Published on

ಸರಗೂರು : ತಾಲೂಕಿನ ಕಲ್ಲಂಬಾಳು ಗ್ರಾಪಂ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವಕ್ಕೆ ಬುಧವಾರ ತೆರೆ ಬಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಮೂರು ದಿನಗಳ ಕಾಲ ವಿಜೃಂಭಣೆಯ ಜಾತ್ರೆ ನೆರವೇರಿತು. ಅಮ್ಮನವರ ಉತ್ಸವ ಮೂರ್ತಿಯನ್ನು ಹೂವಿನ ಅಲಂಕೃತ ಪಲ್ಲಕಿ ಮೇಲೆ ಕೂರಿಸಿ ಸಂಪ್ರದಾಯದಂತೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಚಿಕ್ಕ ದೇವಮ್ಮನ ಬೆಟ್ಟದಿಂದ ಹೊರಟ ಮೆರವಣಿಗೆ ಸೋಮವಾರ ರಾತ್ರಿಪೂರ್ಣ ಸಂಚರಿಸಿ ಕುಂದೂರು ಗ್ರಾಮಕ್ಕೆ ಮಂಗಳವಾರ ಬೆಳಗ್ಗೆ ತಲುಪಿತು. ಸತ್ತಿಗೆ, ಸೂರಿಪಾನಿ ವಾದ್ಯದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ತಾಯಿಗೆ ಪೂಜೆ ಸಲ್ಲಿಸಿ ಭಕ್ತರು ಧನ್ಯತೆ ಮೆರೆದರು. ಗ್ರಾಮದಲ್ಲಿ ಮೂರು ದಿನ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಶಾಸಕ ಅನಿಲ್ ಚಿಕ್ಕಮಾದು, ತಹಸೀಲ್ದಾರ್ ರುಕೀಯಾ ಬೇಗಂದೇವಿಯ ದರ್ಶನ ಪಡೆದರು. ಗ್ರಾಪಂ ಅಧ್ಯಕ್ಷೆ ಭಾಗ್ಯಾ, ಉಪಾಧ್ಯಕ್ಷೆ ಇಂದ್ರಾಣಿ,
ಧಾರ್ಮಿಕ ದತ್ತಿ ಇಲಾಖೆ ಇಒ ರಘು,ಪಾರುಪತ್ತೇದಾರ ಮಹದೇವಸ್ವಾಮಿ, ಗ್ರಾಪಂ ಸದಸ್ಯರಾದ ದಡದಹಳ್ಳಿ ಚಿನ್ನಸ್ವಾಮಿ, ನಾಗಣ್ಣ, ಕುಂದೂರು ಮೂರ್ತಿ, ಶಂಭುಲಿಂಗನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net