27ರಂದು ತ್ರಿಪುರ ಸುಂದರಿ ಮಹಾ ರಥೋತ್ಸವ

IMG-20240120-WA0012
Published on

ಮೂಗೂರು : ಪೌರಾಣಿಕ ಹಿನ್ನೆಲೆಯ ಮೂಗೂರು ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಜ.25ರಿಂದ 29 ರವರೆಗೆ ಆಯೋಜನೆಗೊಂಡಿದೆ. 27ರಂದು ಮಹಾ ರಥೋತ್ಸವದ ಮೂಲಕ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರಕಲಿದೆ.
ಮೂಗೂರು ಚಿಗುರು ಎಂದೇ ಪ್ರಸಿದ್ಧಿ ಪಡೆದ ಅಮ್ಮ ನವರ ದಿವ್ಯ ಶಕ್ತಿಯಿಂದ ಧಾರ್ಮಿಕ ಸುಕ್ಷೇತ್ರವಾಗಿಯೂ ಸನ್ನಿಧಿ ಖ್ಯಾತಿ ಪಡೆದಿದೆ. ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸುವ ತಿಬ್ಬಾದೇವಿಯು ನಂಬಿದ ಭಕ್ತರ ಮಹಾಮಾತೆಯಾಗಿದ್ದಾಳೆ. ಜಾತ್ರೆ ಆಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸ್ ಅಧಿಕಾರಿಗಳು ಮತ್ತು ದೇಗುಲ ಮುಖ್ಯಸ್ಥರ ಸಮ್ಮುಖ
ಸಿದ್ಧತಾ ಸಭೆ ನಡೆದಿದೆ. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಅಮ್ಮನವರ ರಥೋತ್ಸವಕ್ಕೂ ಒಂದುವಾರ ಮುನ್ನ ವಿಶೇಷ ವಿಧಿ ವಿಧಾನಗಳು ಆರಂಭಗೊಳ್ಳಲಿವೆ. 22 ರಂದು ವಧೆ ಉತ್ಸವ, ರಾತ್ರಿ ಕಣಿಯರ ಮಂಟಪದಲ್ಲಿ ಪೂಜೆ, 23 ರಂದು ಶೇಷ, ಪಕ್ಷಿ ವಾಹನೋತ್ಸವ ,24 ರಂದು ಸಿಂಹ ವಾಹನೋತ್ಸವ ಹಾಗೂ ಚಂದ್ರ ಮಂಡಲ ಉತ್ಸವ, 25 ರಂದು ರುದ್ರಾಕ್ಷಿ ಮಂಟಪದ ಉತ್ಸವ, 26ರಂದು ಹೂವಿನ ಪಲ್ಲಕ್ಕಿಯಲ್ಲಿ ತೆಪ್ಪೋತ್ಸವ, 27ರಂದು ಮಹಾ ರಥೋತ್ಸವ, 28ರಂದು ಹೊಸಹಳ್ಳಿಯಲ್ಲಿ ಚಿಗುರು ಕಡಿಯುವುದು, 29 ರಂದು ಅಳು ಪಲ್ಲಕ್ಕಿಯಲ್ಲಿ ವೈಮಾಳಿಗೆ ಉತ್ಸವ, ರಾತ್ರಿ ದೇಗುಲದಲ್ಲಿ ಪೂರ್ಣಾಭಿಷೇಕ ಮತ್ತು ಮಹಾ ಮಂಗಳಾರತಿ ನೆರವೇರಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net