ವಿಟ್ಲ: ಮಠದಹಿತ್ಲು ಶ್ರೀನಾಗ, ಶ್ರೀಜಟಾಧಾರಿ ಮತ್ತು ರಾಜನ್ ದೈವ ಗುಳಿಗ ಸೇವಾ ಸಮಿತಿ ವತಿಯಿಂದ ಕಾಲಾವಽಯ ನಾಗ ತಂಬಿಲ, ಜಟಾಧಾರಿ ಮೈಮೆ ಮತ್ತು ರಾಜನ್ ದೈವ ಗುಳಿಗ ದೈವದ ಕೋಲ ಫೆ.೭ಮತ್ತು ೮ರಂದು ನಡೆಯಲಿದೆ.
೭ರಂದು ಬೆಳಗ್ಗೆ ೮ಕ್ಕೆ ಪ್ರಾರ್ಥನೆ, ಸ್ಥಳಶುದ್ಧಿ, ಪಂಚಗವ್ಯ ಪುಣ್ಯಾಹಃ, ಶ್ರೀಗಣಪತಿ ಹೋಮ, ನಾಗದೇವರಿಗೆ ತಂಬಿಲ ಸೇವೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೪ಕ್ಕೆ ಕುಡಾಲು ಬಾಡೂರು ಚಾವಡಿಯಿಂದ ಶ್ರೀ ಜಟಾಧಾರಿ ದೈವದ ಭಂಡಾರ ಆಗಮನ, ನವಕ ಕಲಶಾಭಿಷೇಕ, ತಂಬಿಲಾದಿ ಸೇವೆ, ಸಂಜೆ ೬.೩೦ಕ್ಕೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ವಹಿಸಲಿದ್ದು, ಧಾರ್ಮಿಕ ಉಪನ್ಯಾಸವನ್ನು ಅಂತಾರಾಷ್ಟ್ರೀಯ ನಿರೂಪಕ ದಿನೇಶ್ ಸುವರ್ಣ ರಾಯಿ ನಡೆಸಲಿದ್ದಾರೆ. ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಜಟಾಧಾರಿ ದೈವಸ್ಥಾನದ ಆನುವಂಶಿಕ ಮೊಕ್ತೇಸರ ನೆರಿಯ ಹೆಗ್ಗಡೆ ಲಕ್ಷ್ಮೀನಾರಾಯಣ ಭಟ್, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್, ಚಂದ್ರನಾಥ ಸ್ವಾಮಿ ಬಸದಿಯ ಜಿತೇಶ್ ಎಂ., ಉದ್ಯಮಿ ದಿವಾಕರ ದಾಸ್ ನೇರ್ಲಾಜೆ ಭಾಗವಹಿಸಲಿದ್ದಾರೆ. ರಾತ್ರಿ ೧೦ಕ್ಕೆ ಜಟಾಧಾರಿ ದೈವದ ಭಂಡಾರ ಮೈಮೆ ಗದ್ದೆಗೆ ಆಗಮಿಸಲಿದೆ. ೮ರಂದು ಸಂಜೆ ೪ಕ್ಕೆ ರಾಜನ್ ದೈವ ಗುಳಿಗನ ಭಂಡಾರ ಕಲ್ಲಗದ್ದೆ ಭಂಡಾರದ ಮನೆಯಿಂದ ಆಗಮನ, ರಾತ್ರಿ ೭ರಿಂದ ರಾಜನ್ ದೈವ ಗುಳಿಗನ ಕೋಲ ನಡೆಯಲಿದೆ.