ಐಚಿ-ನಗೋಯಾ: ಏಷ್ಯನ್ ಗೇಮ್ಸ್ (Asian Games) 20ನೇ ಆವೃತ್ತಿಯ ಮೊದಲ ಚಿನ್ನದ ಪದಕವನ್ನು ಆತಿಥೇಯ ಜಪಾನ್ ತಂಡವೇ ಗೆದ್ದುಕೊಂಡಿದೆ. ಪುರುಷರ ಟ್ರಯಾಥ್ಲಾನ್ನಲ್ಲಿ ಜಪಾನ್ನ ಟಕುಮಿ ಹೊಜೊ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 750 ಮೀ. ಈಜು, 20 ಕಿ.ಮೀ. ಬೈಕ್ ರೈಡ್ ಮತ್ತು 5 ಸಾವಿರ ಮೀ. ಓಟದ ಸ್ಪರ್ಧೆಯನ್ನು 30 ವರ್ಷದ ಹೊಜೊ 52 ನಿಮಿಷ, 56 ಸೆಕೆಂಡ್ಗಳಲ್ಲಿ ಮುಗಿಸಿ ಈ ಸಾಧನೆ ಮಾಡಿದರು ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೂ ಅರ್ಹತೆ ಗಳಿಸಿದರು. ಚೀನಾದ ಝಂಗ್ ಕ್ಸಿರುಯಿ ಬೆಳ್ಳಿ ಮತ್ತು ಕಜಾಕ್ಸ್ತಾನದ ಅರ್ಲಾನ್ ಝನಬೇ ಕಂಚಿನ ಪದಕಕ್ಕೆ ಕೊರಳೊಡ್ಡಿದರು.