

ಟೋಕಿಯೊ: ಜಪಾನ್ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಶನಿವಾರ ಪೆಸಿಫಿಕ್ ಸಾಗರದಲ್ಲಿ ಪತನಗೊಂಡಿವೆ. ಈ ಹೆಲಿಕಾಪ್ಟರ್‌ಗಳಲ್ಲಿ ಒಟ್ಟು ಎಂಟು ಮಂದಿ ಸಿಬ್ಬಂದಿ ಇದ್ದರು. ಅದರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಪಾನ್‌ನ ಸ್ವ-ರಕ್ಷಣಾ ಪಡೆ (ಎಸ್‌ಡಿಎಫ್) ವಕ್ತಾರರು ಶನಿವಾರ ತಡರಾತ್ರಿ ಘಟನೆಯನ್ನು ದೃಢಪಡಿಸಿದ್ದು, ಆರಂಭದಲ್ಲಿ ಒಬ್ಬ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎನ್ನಲಾಗಿತ್ತಾದರೂ, ನಂತರ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.
ಎರಡು ಎಸ್ಎಚ್-60ಕೆ ಹೆಲಿಕಾಪ್ಟರ್ ತಡರಾತ್ರಿ ತರಬೇತಿ ವೇಳೆ ಟೋಕಿಯೊದ ದಕ್ಷಿಣ ಪೆಸಿಫಿಕ್ ಮಹಾಸಾಗರದ ತೊರಿಶಿಮಾದ್ವೀ ಪದ ಬಳಿ ಸಂಪರ್ಕ ಕಳೆದುಕೊಂಡಿತು ಎಂದು ರಕ್ಷಣಾ ಸಚಿವ ಮಿನೋ ರು ಕಿಹರಾ ಸುದ್ದಿಗಾರರಿಗೆ ತಿಳಿಸಿದರು.