

ಜಪಾನ್: ವ್ಯಕ್ತಿಯೊಬ್ಬ ತನ್ನನ್ನು ತಾನು ನಾಯಿಯಾಗಿ ಪರಿವರ್ತಿಸುವ ಮೂಲಕ ತನ್ನ ಜೀವಮಾನದ ಕನಸನ್ನು ಈಡೇರಿಸಿಕೊಂಡಿದ್ದು, ಟೊಕೊ ಎಂಬುವವರು ರೂಪಾಂತರ ಪ್ರಕ್ರಿಯೆಗೆ ಒಳಗಾಗಲು ಎರಡು ಮಿಲಿಯನ್ ಯೆನ್ (ಅಂದಾಜು ರೂ 12 ಲಕ್ಷ) ಖರ್ಚು ಮಾಡಿದ್ದರು. ಟಿವಿ ಜಾಹೀರಾತುಗಳು ಮತ್ತು ಚಲನಚಿತ್ರಗಳಿಗೆ ವೇಷಭೂಷಣಗಳನ್ನು ರಚಿಸಲು ಹೆಸರುವಾಸಿಯಾದ ಜಪಾನಿನ ಕಂಪನಿ ಜೆಪ್ಪೆಟ್, ಟೊಕೊ ಅವರ ಕನಸನ್ನು ನನಸಾಗಿಸಿದೆ. ಕಂಪನಿಯ ವಕ್ತಾರರ ಪ್ರಕಾರ, ಕೋಲಿ ನಾಯಿಯ ಮಾದರಿಯಲ್ಲಿ ಹೈಪರ್-ರಿಯಲಿಸ್ಟಿಕ್ ಡಾಗ್ ಉಡುಪನ್ನು ರಚಿಸಲು ಅವರಿಗೆ 40 ದಿನಗಳು ಬೇಕಾಯಿತು.
'ನಾನಿನ್ನು ನಾಯಿಯಂತೆ ಬದುಕಲಾರೆ’
ಆದ್ರೆ ವಿಷಯ ಈತ ನಾಯಿಗೆ ಖರ್ಚು ಮಾಡಿದ್ದಲ್ಲ. ಒಂದು ವರ್ಷದಿಂದ ಸಾಮಾಜಿಕ ಜಾಲತಾಣಿಗರ ಪ್ರೀತಿ ಗಳಿಸಿದ್ದ ಜಪಾನಿನ ಟೋಕೊ ಎಂಬ ನಾಯಿ ವೇಷಧಾರಿ ಮನುಷ್ಯ ಇದೀಗ ಮಹತ್ತರ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾನೆ. ಇನ್ನು ಮುಂದೆ ತಾನು ನಾಯಿ ವೇಷ ಧರಿಸಲಾರೆ. ತನ್ನ ಜೀವಮಾನದ ಈ ಕನಸನ್ನು ನನಸಾಗಿಸಲು ಈಡೇರಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾನೆ.
12 ಲಕ್ಷ ಖರ್ಚು ಮಾಡಿ ನಾಯಿಯ ವೇಷವನ್ನು ಖರೀದಿಸಿದ್ದ ಈತ ವಾರಕ್ಕೊಮ್ಮೆ ಆ ವೇಷ ಧರಿಸಿ ನಾಯಿಯಂತೆ ರೂಪಾಂತರಗೊಂಡು ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುತ್ತಿದ್ದ. ಆದರೆ ಇದೀಗ ಇದ್ದಕ್ಕಿದ್ದಂತೆ ಈ ‘ನಾಯಿಬದುಕು’ ತನಗೆ ಬೇಡ ಎಂದು ತೀರ್ಮಾನಿಸಿದ್ದಾನೆ!
ಆದರೆ ಇದೀಗ ಅಮೆರಿಕದ ಕೆನಲ್ ಕ್ಲಬ್ನ (American Kennel Club) ನ್ಯಾಯಾಧೀಶರು ಟೋಕೊ ವಿಷಯವಾಗಿ ಟೀಕಿಸಿದ್ದು ಟೋಕೊ ವೇಷಧಾರಿ ಯುವಕನಿಗೆ ಬೇಸರ ಮೂಡಿಸಿದೆ.
ಪ್ರಾಣಿಪ್ರೇಮ ಮತ್ತು ತಾನು ನಾಯಿಯಂತೆ ವೇಷ ಧರಿಸುವುದು ತನಗೆ ಮತ್ತು ತನ್ನ ಅಭಿಮಾನಿಗಳಿಗೆ ಸಂತೋಷವನ್ನು ನೀಡುತ್ತದೆ ಎಂದು ನ್ಯಾಯಾಧೀಶರ ಮುಂದೆ ಸಮರ್ಥಿಸಿಕೊಂಡನಾದರೂ ಯೂಟ್ಯೂಬ್ನಿಂದ ತಾನು ಗಳಿಸುತ್ತಿರುವ ಹಣದ ಬಗ್ಗೆ ನಿಖರವಾದ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅಲ್ಲದೇ ಇದೀಗ ಇವನ ಯೂಟ್ಯೂಬ್ ಚಂದಾದಾರರ ಸಂಖ್ಯೆ 51,000ಕ್ಕೆ ಏರಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಈತ ಇದೀಗ ತನಗೆ ಖುಷಿ ನೀಡುತ್ತಿದ್ದ ಹವ್ಯಾಸವನ್ನು ತೊರೆಯಲು ಸಿದ್ಧನಾಗಿದ್ದಾನೆ.