

ಮುಂಬೈ: ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ನಟಿ ಜಾಹ್ನವಿ ಕಪೂರ್ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸರಿಯಾಗಿ ಗ್ರಹಿಸದೆ ಟೀಕೆ ಮಾಡುವವರಿಗೇನೂ ಕಡಿಮೆಯಿಲ್ಲ. ಇಲ್ಲಿ ಟೀಕಿಸುವುದೇ ಸಂಸ್ಕೃತಿಯಾಗಿದೆ. ನೀವು ಸಾರ್ವಜನಿಕ ವ್ಯಕ್ತಿಯಾಗಿರಲಿ ಅಥವಾ ಇಲ್ಲದಿರಲಿ, ಟೀಕೆಗಳು ಯಾವಾಗಲೂ ಇದ್ದೇ ಇರುತ್ತವೆ. ಆದ್ದರಿಂದ ಆ ಕಾಮೆಂಟ್ಗಳಿಗೆ ಆದ್ಯತೆ ನೀಡುವ ಅಗತ್ಯವಿಲ್ಲ ಎಂದು ಜಾಹ್ನವಿ ಹೇಳಿದ್ದಾರೆ.
ನಟಿ ಜಾನ್ವಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಮಕ್ಕಳು ಎದುರಿಸುತ್ತಿರುವ ಟ್ರೋಲ್ಗಳ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇವು ಕಾಮನ್ ಆಗಿವೆ. ಜನರು ಇಂದು ಒಂದನ್ನು ಹೊಗಳಿದರೆ ನಾಳೆ ಅದನ್ನೇ ಟೀಕಿಸುತ್ತಾರೆ. ಅಪರಿಚಿತರು ಏನೋ ಹೇಳಿದರು ಎಂದು ಮನೆಯಲ್ಲಿ ಕುಳಿತು ಅಳುವುದು ಏಕೆ? ನಮಗೆ ನಾವೇ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಗೆ ಪಾರ್ಟಿ ನೀಡುವ ಕುರಿತು ಮಾತನಾಡಿ, ರಾಧಿಕಾ ನನಗೆ ಒಳ್ಳೆಯ ಸ್ನೇಹಿತೆ. ಆಕೆ ನಮ್ಮೊಂದಿಗೆ ತುಂಬಾ ಮೋಜು ಮಾಡುತ್ತಾಳೆ. ನಮ್ಮನ್ನು ಸಹ ಸಂತಸದಿಂದ ಇರುವಂತೆ ನೋಡಿಕೊಳ್ಳುತ್ತಾಳೆ. ಹಾಗಾಗಿ ಮದುವೆಗೂ ಮುನ್ನವೇ ಅವಳಿಗಾಗಿ ಸ್ಪೆಷಲ್ ಪಾರ್ಟಿ ಆಯೋಜಿಸಲು ನಮ್ಮ ಸ್ನೇಹಿತರೆಲ್ಲ ಯೋಚಿಸಿದ್ದೆವು. ಅದರ ಭಾಗವಾಗಿ ಪಾರ್ಟಿಯನ್ನು ಪ್ಲಾನ್ ಮಾಡಿದೆವು. ಅವಳು ಸಂತೋಷವಾಗಿದ್ದಾಳೆ ಎಂದು ಹೇಳಿದರು.