ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಜೋ ಬಿಡೆನ್ ನಿರ್ಧಾರವನ್ನು ಮಾಜಿ ಅಧ್ಯಕ್ಷ ಒಬಾಮಾ ಶ್ಲಾಘಿಸಿದರು.
ಇದನ್ನೂ ಓದಿ: ಚುನಾವಣಾ ರೇಸ್‌ನಿಂದ ಹಿಂದೆ ಸರಿದ ಜೋ ಬೈಡನ್! ಒತ್ತಡದ ಬೆನ್ನಲ್ಲೇ ನಿರ್ಗಮನ?
ಬಿಡೆನ್ ಅವರ ನಿರ್ಧಾರವು ದೇಶದ ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತದೆ ಎಂದು ಒಬಾಮಾ ಪ್ರತಿಕ್ರಿಯಿಸಿದ್ದಾರೆ.
ಎರಡನೇ ಬಾರಿ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅರ್ಹತೆಯೂ ಬಿಡೆನ್ಗೆ ಇದೆ. ಆದರೆ, ಇಂತಹ ನಿರ್ಧಾರ ಕೈಗೊಂಡಿದ್ದಕ್ಕಾಗಿ ಅವರು ಮಹಾನ್ ದೇಶಭಕ್ತ ಎಂದು ಶ್ಲಾಘಿಸಿದರು.
ನ್ಯಾಟೋ ಪುನಶ್ಚೇತನಗೊಂಡಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದರ ವಿರುದ್ಧ ಒಬಾಮಾ ವಿಶ್ವದ ರಾಷ್ಟ್ರಗಳನ್ನು ಒಗ್ಗೂಡಿಸಿದರು ಎಂದು ಅವರು ಹೇಳಿದರು.
ಮತ್ತೊಂದೆಡೆ, ಮುಂದಿನ ದಿನಗಳಲ್ಲಿ ಡೆಮಾಕ್ರಟಿಕ್ ಪಕ್ಷದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯಲಿವೆ. ನೂತನ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಗೆ ಸೂಕ್ತ ಪ್ರಕ್ರಿಯೆಗೆ ಪಕ್ಷದ ಮುಖಂಡರು ಮುಂದಾಗಲಿದ್ದಾರೆ ಎಂದು ಒಬಾಮಾ .ವಿಶ್ವಾಸ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಉಮೇದುವಾರಿಕೆಗೆ ಬಿಡೆನ್ ಬೆಂಬಲ ಘೋಷಿಸಿದ್ದು ತಿಳಿದ ಸಂಗತಿಯೇ. ಒಬಾಮಾ ಅವರಿಗೆ ಇದುವರೆಗೆ ಬೆಂಬಲ ವ್ಯಕ್ತಪಡಿಸದಿದ್ದರೂ, ಹೊಸ ಅಭ್ಯರ್ಥಿಯ ಆಯ್ಕೆಗೆ ಸೂಕ್ತ ಪ್ರಕ್ರಿಯೆಗೆ ಕರೆ ನೀಡಿರುವುದು ಈಗ ಚರ್ಚೆಯ ವಿಷಯವಾಗಿದೆ. ಒಬಾಮಾ ಹ್ಯಾರಿಸ್‌ಗೆ ಮಾರ್ಗದರ್ಶಕರಾಗಿದ್ದಾರೆ ಎನ್ನಲಾಗಿದೆ. ಡೆಮಾಕ್ರಟಿಕ್ ಪಕ್ಷದ ಇನ್ನೋರ್ವ ಪ್ರಮುಖ ನಾಯಕಿ ನ್ಯಾನ್ಸಿ ಪೆಲೋಸಿ ಅವರು ಕಮಲಾ ಹರಸ್‌ಗೆ ಬೆಂಬಲ ಘೋಷಿಸಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಜೈಲಿನಲ್ಲಿ ಕೇಜ್ರಿವಾಲ್ ಹತ್ಯೆಗೆ ಸಂಚು: ಎಎಪಿ ಸಂಸದ ಸಂಜಯ್ ಸಿಂಗ್ ಹೀಗೆ ಹೇಳಿದ್ದೇಕೆ?