

ಹೈದರಾಬಾದ್: ಸಮಂತಾ ‘ಪುಷ್ಪ’ ಸಿನಿಮಾದಲ್ಲಿ ಐಟಂ ಸಾಂಗ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು. ಆ ಹಾಡಿನ ಮೂಲಕ ಸಮಂತಾಗೆ ಭಾರೀ ಖ್ಯಾತಿಯೂ ಸಿಕ್ಕಿತ್ತು. ಈಗ 'ಪುಷ್ಪಾ 2' ಚಿತ್ರದಲ್ಲಿ ಅಂತಹ ಐಟಂ ಸಾಂಗ್ ಇದೆ ಎಂಬ ಸುದ್ದಿಯೊಂದು ವೈರಲ್ ಆಗಿದ್ದು, ಆ ಹಾಡಿನಲ್ಲಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಾಗುವಂತೆ ಮಾಡುತ್ತಿದೆ. ಈ ಚಿತ್ರವನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶೂಟಿಂಗ್ ಕೂಡ ಶರವೇಗದಲ್ಲಿ ನಡೆಯುತ್ತಿದೆ. 'ಪುಷ್ಪ' ಮೊದಲ ಭಾಗದಲ್ಲಿ ಸಮಂತಾ ಅಭಿನಯದ ಐಟಂ ಸಾಂಗ್ ಭರ್ಜರಿ ಯಶಸ್ಸು ಕಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಈಗ ಈ ಎರಡನೇ ಭಾಗದಲ್ಲೂ ಅಂಥದ್ದೇ ಐಟಂ ಸಾಂಗ್ ಇಡಲು ನಿರ್ಮಾಪಕ, ನಿರ್ದೇಶಕರು ಚಿಂತನೆ ನಡೆಸಿದ್ದಾರೆ. ಆದರೆ ಇತ್ತೀಚಿನವರೆಗೂ ದಿಶಾ ಪಟಾನಿ ಅಲ್ಲು ಅರ್ಜುನ್ ಜೊತೆ ಈ ಐಟಂ ಸಾಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಆ ಐಟಂ ಸಾಂಗ್ ನಲ್ಲಿ ನಟಿಸುತ್ತಿರುವುದು ಜಾನ್ವಿ ಕಪೂರ್ ಎಂದು ಹೇಳಲಾಗುತ್ತಿದೆ.
ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮೊದಲ ಭಾಗದಲ್ಲಿ ಐಟಂ ಸಾಂಗ್ ಜೊತೆಗೆ ಉಳಿದ ಹಾಡುಗಳೂ ಭಾರೀ ಹಿಟ್ ಆಗಿದ್ದವು.
ಜಾಹ್ನವಿ ಕಪೂರ್ ಈ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡರೆ ಅವರ ತಾಯಿ ಶ್ರೀದೇವಿಗಿಂತ ಹೆಚ್ಚು ಜನಪ್ರಿಯರಾಗುತ್ತಾರೆ ಎಂಬ ಮಾತು ಉದ್ಯಮದಲ್ಲಿ ಕೇಳಿಬರುತ್ತಿದೆ. ಸದ್ಯ ಜಾಹ್ನವಿ 'ದೇವರ' ಚಿತ್ರದಲ್ಲಿ ಎನ್‌ಟಿಆರ್‌ಗೆ ಜೋಡಿಯಾಗಿ ನಟಿಸಿದ್ದು, ರಾಮ್ ಚರಣ್ ಜೊತೆ ಬುಚ್ಚಿ ಬಾಬು ನಿರ್ದೇಶನದ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.