

ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಮತ್ತು ಹಾರ್ಸ್ ರೈಡರ್ ಮತ್ತು ಪೋಲೊ ಪ್ಲೇಯರ್ ಶಿಖರ್ ಪಹಾರಿಯಾ ಹೆಚ್ಚಾಗಿ ರೆಸ್ಟೋರೆಂಟ್‌ಗಳು, ಪಬ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರ ಮೊಮ್ಮಗ.
ಜಾನ್ವಿ ಕಪೂರ್ ಶಿಖರ್ ಪಹಾರಿಯ ಅವರನ್ನ ಡೇಟಿಂಗ್ ಮಾಡುತ್ತಿದ್ದಾರೆ ಎಂದುಇ ಹೇಳಲಾಗುತ್ತಿದ್ದು, ಈ ಹಿಂದೆ ಇವರಿಬ್ಬರೂ ಮುಂಬೈ ಏರ್ಪೋರ್ಟ್ನಲ್ಲಿ ಒಟ್ಟಿಗೇ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿತ್ತು.
ಅಷ್ಟೇ ಅಲ್ಲ ಇವರಿಬ್ಬರೂ ಹೆಚ್ಚಾಗಿ ರೆಸ್ಟೋರೆಂಟ್‌ಗಳು, ಪಬ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪಾಪರಾಜಿಗಳು ಇವರ ಫೋಟೋಗಳನ್ನ ಸೆರೆ ಹಿಡಿದು ಅವುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತೆ.
ಜಾನ್ವಿ ಕಪೂರ್ ಮತ್ತು ವದಂತಿಗಳ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ ಮುಂಬೈನಿಂದ ಹಾರಿದ್ದಾರೆ. ಚಿತ್ರಗಳನ್ನು ನೋಡಿ
ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಕಳೆದ ತಿಂಗಳು, ಜಾಹ್ನವಿ ಕಪೂರ್ ಮುಕೇಶ್ ಅಂಬಾನಿಯವರ ಗಣೇಶ್ ವಿಸರ್ಜನ್‌ನಲ್ಲಿ ಮಾಡಿದ ನೃತ್ಯದ ವಿಡಿಯೋ ವೈರಲ್ ಆಗಿತ್ತು. ಇದೀಗ ಜಾನ್ವಿ ಕಪೂರ್ ರೂಮರ್ಡ್ ಬಾಯ್ಫ್ರೆಂಡ್ ಶಿಖರ್ ಪಹಾರಿಯಾ ಇದ್ದ ಕಾರ್ ಹತ್ತಿದ ವಿಡಿಯೋ ಸಖತ್ ವೈರಲ್ ಆಗಿದೆ.
ನಿನ್ನೆ (ನ.5)ರಂದು ಮುಂಬೈನಲ್ಲಿರುವ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ನಿವಾಸದಲ್ಲಿ ದೀಪಾವಳಿ ಹಬ್ಬದ ಸಂಭ್ರಮಾಚರಣೆ ನಡೆದಿದ್ದು,ನಟಿ ಜಾಹ್ನವಿ ಕಪೂರ್ ಗೋಲ್ಡನ್ ಕಲರ್ ಲೆಹಂಗಾ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಪಾರ್ಟಿಯ ನಂತರ ತನ್ನ ಕೂದಲನ್ನು ಬನ್ ರೀತಿಯಲ್ಲಿ ಕಟ್ಟಿಕೊಂಡ ಜಾಹ್ನವಿ ಕಪೂರ್ ಶಿಖರ್ ಪಹಾರಿಯಾ ಕುಳಿತಿದ್ದ ಕಾರನ್ನೇ ಹತ್ತಿದ್ದಾರೆ. ಜಾಹ್ನವಿ ಕಾರ್ ಒಳಗೆ ಬರುತ್ತಿದ್ದಂತೆಯೇ ಶಿಖರ್ ಮೊಗದಲ್ಲಿ ಮ,ಂದಹಾಸ ಮೂಡಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದು ತಮನ್ನಾ ಮತ್ತು ವಿಜಯ್ ವರ್ಮಾ ರೀತಿ ನೀವು ಕೂಡಾ ಕ್ಯೂಟ್ ಕಪಲ್ಸ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.