ಬೆಂಗಳೂರು: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಪ್ರತಿಷ್ಠಿತ ಭೀಮ ಜುವೆಲರ್ಸ್‌ನ ಮಹಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ದೇಶಾದ್ಯಂತ ಗ್ರಾಹಕರರೊಂದಿಗೆ ಬಾಂಧವ್ಯ ಸಾಧಿಸಲು ಮತ್ತು ಮಾರುಕಟ್ಟೆಯಲ್ಲಿ ಸಂಸ್ಥೆಯ ಅಸ್ತಿತ್ವ ಬಲಪಡಿಸಲು ಈ ಆಯ್ಕೆ ಪೂರಕವಾಗುವ ಜತೆಗೆ ಬೆಳವಣಿಗೆಗೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ವಕ್ತಾರರು ಹೇಳಿಕೊಂಡಿದ್ದಾರೆ. ನಟಿ ಜಾಹ್ನವಿ ಕಪೂರ್ ಬಾಲಿವುಡ್ ಸೇರಿ ದಕ್ಷಿಣ ಭಾರತದ ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬ್ರ್ಯಾಂಡ್‌ಗೆ ಸಹಜವಾಗಿ ಹೊಂದಿಕೊಳ್ಳುತ್ತಾರೆ ಎಂದು ಆಯ್ಕೆ ಮಾಡಲಾಗಿದೆ. ಈ ಸಹಭಾಗಿತ್ವವು ಸಂಸ್ಕೃತಿ, ಪರಂಪರೆ, ಮತ್ತು ಆಧುನಿಕತೆಯ ಮೇಲಿಟ್ಟಿರುವ ಗೌರವವನ್ನು ತೋರಿಸುತ್ತದೆ. ಆಯ್ಕೆ ಬಗ್ಗೆ ರಾಯಭಾರಿ ಜಾಹ್ನವಿ ಕಪೂರ್, ‘ಕುಟುಂಬಗಳ ಸಂಭ್ರಮದ ಅತ್ಯಂತ ಸ್ಮರಣೀಯ ಕ್ಷಣಗಳ ಭಾಗವಾಗಿರುವ ಆಭರಣಗಳು ತಲೆಮಾರುಗಳಿಂದ ಹೊತ್ತುಕೊಂಡು ಬಂದಿರುವ ಕಥೆಗಳನ್ನು ತಮ್ಮೊಳಗೆ ಇಟ್ಟುಕೊಂಡಿರುತ್ತವೆ. ಹೀಗಾಗಿ ಭೀಮ ಜುವೆಲರ್ಸ್ ಜತೆಗಿನ ನನ್ನ ಸಂಬಂಧ ಅತ್ಯಂತ ವಿಶೇಷವಾದುದು. ವಿಶ್ವಾಸ, ಸಂಪ್ರದಾಯ ಮತ್ತು ಕರಕುಶಲತೆಯನ್ನು ಪ್ರತಿಬಿಂಬಿಸುತ್ತ ಶತಮಾನದಷ್ಟು ಹಳೆಯ ಪರಂಪರೆಯನ್ನು ಹೊಂದಿರುವ ಭೀಮ ಜುವೆಲರ್ಸ್‌ನ ಭಾಗವಾಗುವುದಕ್ಕೆ ನಾನು ಸಂತೋಷಪಡುತ್ತೇನೆ’ ಎಂದು ಖುಷಿ ಹಂಚಿಕೊಂಡಿದ್ದಾರೆ.