Condom ಜಾಹೀರಾತಿಗೆ ಜಾಹ್ನವಿ ಕಪೂರ್​​​ & ರಣಬೀರ್ ಅತ್ಯುತ್ತಮ ಆಯ್ಕೆ; ರಾಜೀವ್ ಜುನೇಜಾ ಹೀಗೆಳೀದ್ದೇಕೆ? | Rajeev Juneja

Untitled design (65)
Published on

ಮುಂಬೈ: ಪ್ರಪಂಚದಾದ್ಯಂತ ಅನೇಕ ಸೆಲಿಬ್ರಿಟಿಗಳಿಗೆ ಮತ್ತೊಂದು ಆದಾಯದ ಮೂಲವೆಂದರೆ ಜಾಹೀರಾತು ಒಪ್ಪಂದಗಳು. ಪ್ರತಿ ವರ್ಷ ನಟರು ಯಾವ ಚಿತ್ರಗಳಿಗೆ ಸಹಿ ಹಾಕಬೇಕೆಂದು ನಿರ್ಧರಿಸುವುದಿಲ್ಲ. ಆದರೆ ಯಾವ ಬ್ರಾಂಡ್‌ಗಳನ್ನು ಪ್ರತಿನಿಧಿಸಬೇಕು ಮತ್ತು ಆಯ್ಕೆ ಮಾಡಬೇಕು ಎಂಬುದರ ಕುರಿತು ಆಲೋಚಿಸುತ್ತಾರೆ. ಬ್ರಾಂಡ್ ಅಂಬಾಸಿಡರ್‌ಗಳು ಸೂಕ್ತ ಮತ್ತು ನಂಬಲರ್ಹರಾಗಿರಬೇಕು, ಆಗ ಮಾತ್ರ ಗ್ರಾಹಕರ ಮೇಲೆ ಪ್ರಭಾವ ಬೀರಲು ಸಾಧ್ಯ. ಇದು ಸಾಕಷ್ಟು ಜವಾಬ್ದಾರಿಯಿಂದ ಕೂಡಿರುತ್ತದೆ.

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರನ್ನು ಮ್ಯಾನ್‌ಫೋರ್ಸ್ ಕಾಂಡೋಮ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿ 2023ರಲ್ಲಿ ನೇಮಿಸಲಾಯಿತು. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮ್ಯಾನ್‌ಕೈಂಡ್ ಫಾರ್ಮಾದ ಸಹ-ಸಂಸ್ಥಾಪಕ ರಾಜೀವ್ ಜುನೇಜಾ ಅವರು ಕಾರ್ತಿಕ್ ಅನ್ನು ಏಕೆ ಆನ್‌ಬೋರ್ಡ್ ಮಾಡಲಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಡೋಮ್​​ ಬ್ರ್ಯಾಂಡ್‌ಗೆ ಯಾವ ಇತರ ಸ್ಟಾರ್‌ಗಳು ಸೂಕ್ತವೆಂದು ಹಂಚಿಕೊಂಡಿದ್ದಾರೆ.

ಅವರ ಬ್ರ್ಯಾಂಡ್‌ನ ಮಾಜಿ ಬ್ರಾಂಡ್ ಅಂಬಾಸಿಡರ್ ಸನ್ನಿ ಲಿಯೋನ್ ಬದಲಿಗೆ ಕಾರ್ತಿಕ್ ಆರ್ಯನ್ ಅವರನ್ನು ಆಯ್ಕೆ ಮಾಡಲು ಕಾರಣವೇನು ಎಂಬುದನ್ನು ರಾಜೀವ್​ ಜುನೇಜಾ ತಿಳಿಸಿದ್ದಾರೆ. ಈ ಜಾಹೀರಾತಿನಲ್ಲಿ ಕಾರ್ತಿಕ್​ ಆರ್ಯನ್​ ಅವರನ್ನು ಕರೆತರಲು ಮುಖ್ಯ ಕಾರಣ ಪುರುಷರ ವಿಚಾರವಾಗಿ ನಾವು ಗಮನಹರಿಸಿದೆವು. ಯುವಕರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದಾಗಿ ಹೇಳಿದ್ದಾರೆ. ಇದೇ ಸಂದರ್ಶನದಲ್ಲಿ ಪ್ರಸ್ತುತ ಇರುವ ನಟನನ್ನು ಹೊರತುಪಡಿಸಿ ತಮ್ಮ ಬ್ರ್ಯಾಂಡ್​ಗೆ ಯಾವ ನಟ ಮತ್ತು ನಟಿಯನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ರಾಜೀವ್ ಜುನೇಜಾ, ನಟಿಯಾಗಿ ಜಾಹ್ನವಿ ಕಪೂರ್​ ಮತ್ತು ನಟನಾಗಿ ರಣಬೀರ್​ ಕಪೂರ್​​ ಎಂದರು.

ಮ್ಯಾನ್‌ಕೈಂಡ್ ಫಾರ್ಮಾ ಒಡೆತನದ ಮತ್ತೊಂದು ಉತ್ಪನ್ನವಾದ ಪ್ರೆಗಾ ನ್ಯೂಸ್ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಕುರಿತು ಮಾತನಾಡಿದ ರಾಜೀವ್, ಪ್ರಸ್ತುತ ಬ್ರಾಂಡ್ ಅಂಬಾಸಿಡರ್ ಅನುಷ್ಕಾ ಶರ್ಮಾ ಅವರನ್ನು ಶಿಸ್ತುಬದ್ಧ ಮತ್ತು ವೃತ್ತಿಪರ ವ್ಯಕ್ತಿ ಎಂದು ವಿವರಿಸುವ ಪರಿಪೂರ್ಣ ಆಯ್ಕೆಯಾಗಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ತನ್ನ ಮಗಳು ದುವಾ ಪಡುಕೋಣೆ ಸಿಂಗ್ ಅವರನ್ನು ಜಗತ್ತಿಗೆ ಸ್ವಾಗತಿಸಿದ ದೀಪಿಕಾ ಪಡುಕೋಣೆ ಬ್ರಾಂಡ್‌ಗೆ ಮುಂದಿನ ಉತ್ತಮ ಆಯ್ಕೆ ಎಂದು ರಾಜೀವ್ ಹೇಳಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net