ಮನೆ ಮಾಲಿಕ ನಾಪತ್ತೆ, ಲೀಸ್ ಪಡೆದವರು ತ್ರಿಶಂಕು; ಸಿಎಂ ಮುಂದೆ ವಿಚಿತ್ರ ದೂರು!

imresizer-1701073028509
Published on

ಬೆಂಗಳೂರು: ಜನರ ಅಹವಾಲು ಆಲಿಸಲು ಜನ ಸ್ಪಂದನ ನಡೆಸುತ್ತಿರುವ ಮುಖ್ಯಮಂತ್ರಿಯವರ ಮುಂದೆ ಚಿತ್ರ ವಿಚಿತ್ರ ದೂರು ಬರುತ್ತಿದೆ.

ಮನೆ ಮಾಲಿಕ ನಾಪತ್ತೆಯಾದ್ದರಿಂದ ತಾವು ಸಮಸ್ಯೆಗೆ ಸಿಲುಕಿದ ಕುಟುಂಬವೊಂದು ಪರಿಹಾರ ಹುಡುಕಿ ಸಿಎಂ‌ ಬಳಿ ಬಂದಿತ್ತು.

ಮೈಸೂರು ರಸ್ತೆಯ ಬ್ಯಾಟರಾಯನಪುರದ 3 ನೇ ಅಡ್ಡ ರಸ್ತೆಯಲ್ಲಿ ರಾಜೇಶ್ವರಿ ಮಲ್ಲೇಶ್ ಎಂಬುವರ ಮನೆಯಲ್ಲಿ ಭೋಗ್ಯಕ್ಕೆ ನೆಲೆಸಿರುವ ನಿವಾಸಿಗಳು, ಮನೆ ಮಾಲೀಕರು ನಾಪತ್ತೆಯಾಗಿದ್ದು, ಬ್ಯಾಂಕ್ ನವರು ಮನೆ ಜಪ್ತಿಗೆ ಬಂದಿದ್ದಾರೆ ಎಂಬ ಆತಂಕದಲ್ಲಿ ಬಂದಿದ್ದರು.

ನಾವು ಈ ಮನೆಗೆ ಲೀಸ್ ಗೆ ಬಂದಿದ್ದೇವೆ. ಆದರೆ ಮನೆ ಮಾಲೀಕರು ಮನೆಯ ಮೇಲೆ ಸಾಲ ಪಡೆದು ಅದನ್ನು ಕಟ್ಟದೆ ಪರಾರಿ ಆಗಿದ್ದಾರೆ. ಈಗ ಬ್ಯಾಂಕಿನವರು ಮನೆ ಜಪ್ತಿಗೆ ಬಂದಿದ್ದಾರೆ.‌ ನಮ್ಮ ಲೀಸ್ ಹಣವೂ ಹೋಗುತ್ತದೆ ಎಂದು ಗೋಳು ತೋಡಿಕೊಂಡರು.

ತಾವು ಹಾಕಿದ ಹಣ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಮಕ್ಕಳೊಂದಿಗೆ ಬೀದಿಗೆ ಬರುವ ಸ್ಥಿತಿ ಇದೆ, ನೆರವು ನೀಡಿ ಎಂದು ಮನವಿ ಮಾಡಿದರು.

ತಕ್ಷಣ ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಕರೆದ ಮುಖ್ಯಮಂತ್ರಿಯವರು, ಪ್ರಕರಣ ಪರಿಶೀಲಿಸುವಂತೆ ಸೂಚಿಸಿದರು. ಪೊಲೀಸ್ ಆಯುಕ್ತರು ಸಮಸ್ಯೆ ಕೇಳಿಸಿಕೊಂಡು ಪರಿಹಾರಕ್ಕೆ ಡಿಸಿಪಿ ಅವರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net