ಜನಜಾಗೃತಿ ಸೇವಾ ರಥಯಾತ್ರೆ ಮಾ.8ರಂದು ಶಿವಮೊಗ್ಗಕ್ಕೆ

Ghorabai Sena
Published on

ಶಿವಮೊಗ್ಗ: ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ರಾಜ್ಯ ಘಟಕದಿಂದ ಗೋರ್-ಬಂಜಾರ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಗೋರ್ ಬಂಜಾರ ಸಮುದಾಯದ ಹಕ್ಕು, ಪ್ರಗತಿ, ಪರಿವರ್ತನೆಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಜಾಗೃತಿ ಸೇವಾ ರಥಯಾತ್ರೆ ಮಾ.8ರಂದು ಶಿವಮೊಗ್ಗಕ್ಕೆ ಆಗಮಿಸಲಿದೆ ಎಂದು ಗೋರ ಬಂಜಾರ ಸಮುದಾಯದ ಮುಖಂಡ ಕೆ.ಶಶಿಕುಮಾರ್ ಹೇಳಿದರು.

8ರಂದು ರಥಯಾತ್ರೆ ಹೊನ್ನಾಳಿ ಮೂಲಕ ಶಿಕಾರಿಪುರ ತಲುಪಲಿದೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಸ್ವಾಗತ ಕೋರುವರು. ಸಂಜೆ ಚಿನ್ನಿಕಟ್ಟೆ, ಸವಳಂಗ ಮಾರ್ಗವಾಗಿ ಕುಂಚೇನಹಳ್ಳಿ ತಾಂಡಾಕ್ಕೆ ಆಗಮಿಸಲಿದೆ. ಸಭೆಯಲ್ಲಿ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಪಾಲ್ಗೊಳ್ಳುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನವುಲೆ ಬಂಜಾರ ಭವನದಲ್ಲಿ ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಸಮಾಜದ ಮುಖಂಡರು, ಗೋರ್‌ಸೇನಾ ಪದಾಧಿಕಾರಿಗಳು, ಶಿವಮೊಗ್ಗ ಜಿಲ್ಲೆಯ ತಾಂಡಾದ ನಾಯಕ್, ಡಾವ್, ಕಾರ್‌ಬಾರಿ ಎಲ್ಲರೂ ಭಾಗವಹಿಸುವರು ಎಂದರು.

ಮಾ.9ರಂದು ಬೆಳಗ್ಗೆ ರಥಯಾತ್ರೆಯು ಉಷಾ ನಸಿರ್ಂಗ್ ಹೋಂ ಮಾರ್ಗವಾಗಿ ಟಿ.ಸೀನಪ್ಪ ಶೆಟ್ಟಿ ವೃತ್ತ, ನೆಹರು ರಸ್ತೆ, ಶಿವಪ್ಪ ನಾಯಕ ವೃತ್ತ ತಲುಪಲಿದೆ. ಶಿವಪ್ಪನಾಯಕ ಪ್ರತಿಮೆಗೆ ಗಣ್ಯರಿಂದ ಪುಷ್ಪಾರ್ಚನೆ, ನಂತರ ಮಲವಗೊಪ್ಪ ಮಾರ್ಗವಾಗಿ ಭದ್ರಾವತಿಗೆ ತೆರಳಲಿದೆ. ಭದ್ರಾವತಿ ಅಂಡರ್‌ಬ್ರಿಡ್ಜ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ತರೀಕೆರೆ ಮಾರ್ಗವಾಗಿ ಚಿಕ್ಕಮಗಳೂರು ಜಿಲ್ಲೆಗೆ ತಲುಪಲಿದೆ ಎಂದು ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ ರಾಠೋಡ, ಜಿಲ್ಲಾ ಸಂಚಾಲಕ ರಾಕೇಶ್, ಪ್ರಮುಖರಾದ ರೇಣುಕಾ ನಾಯ್ಕ, ಡಿ.ಆರ್.ಗಿರೀಶ್, ನಾನ್ಯಾನಾಯ್ಕಾ, ಕಲ್ಲೇಶ್, ಹನುಮಂತು ಜಿ.ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net