ಜಮ್ಮು ಮತ್ತು ಕಾಶ್ಮಿರದಲ್ಲಿ ಸ್ಥಳೀಯ ಯುವಕರು ಉಗ್ರಸಂಘಟನೆ ಸೇರುವ ಪ್ರಮಾಣದಲ್ಲಿ ಕಡಿಮೆ; ಈ ವರ್ಷ ಹತ್ಯೆಗೀಡಾದ ಉಗ್ರರು 160

Terrorists 31 Dec 19
Published on

ಜಮ್ಮು: ಜಮ್ಮುಮತ್ತು ಕಾಶ್ಮೀರದಲ್ಲಿ 2019ರಲ್ಲಿ ಒಟ್ಟು 160 ಉಗ್ರರರನ್ನು ಹತ್ಯೆ ಮಾಡಲಾಗಿದ್ದು 102 ಮಂದಿಯನ್ನು ಬಂಧಿಸಲಾಗಿದೆ, ಇನ್ನೂ ಸುಮಾರು 250 ಉಗ್ರರು ಇಲ್ಲಿ ಸಕ್ರಿಯರಾಗಿದ್ದಾರೆ ಎಂದು ಪೊಲೀಸ್​ ಮಹಾನಿರ್ದೇಶಕ ದಿಲ್​ಬಾಗ್ ಸಿಂಗ್​ ಹೇಳಿದ್ದಾರೆ.

ಜಮ್ಮುಮತ್ತು ಕಾಶ್ಮಿರದಲ್ಲಿ ಸ್ಥಳೀಯ ಯುವಕರು ಉಗ್ರಸಂಘಟನೆಗಳನ್ನು ಸೇರುವ ಪ್ರಮಾಣದಲ್ಲೂ ಗಣನೀಯವಾಗಿ ಕಡಿಮೆ ಆಗಿದೆ. 2018ರಲ್ಲಿ ಒಟ್ಟು 218 ಸ್ಥಳೀಯ ಯುವಜನರು ಉಗ್ರಗುಂಪನ್ನು ಸೇರಿದ್ದರು. ಆದರೆ 2019ರಲ್ಲಿ ಕೇವಲ 139 ಮಂದಿ ಸೇರಿದ್ದಾರೆ. ಅದರಲ್ಲಿ ಸದ್ಯ 89 ಮಂದಿ ಮಾತ್ರ ಉಳಿದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

2018ಕ್ಕೆ ಹೋಲಿಸಿದರೆ 2019ರಲ್ಲಿ ಉಗ್ರರ ಉಪಟಳ ಶೇ.30ರಷ್ಟು ಕಡಿಮೆ ಆಗಿತ್ತು. ಹಾಗೇ ಕಾನೂನು ಮತ್ತು ಸುವ್ಯವಸ್ಥೆ ಕದಡುವ ಘಟನೆಗಳೂ ಶೇ.36ರಷ್ಟು ಕಡಿಮೆ ನಡೆದಿವೆ ಎಂದು ಹೇಳಿದ್ದಾರೆ.

2018ರಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ 625 ಘಟನೆಗಳು ನಡೆದಿದ್ದವು. ಆದರೆ 2019ರಲ್ಲಿ ಕೇವಲ 481 ಘಟನೆಗಳು ಉಂಟಾಗಿವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net