ಜಮ್ಮು ಕಾಶ್ಮೀರದಲ್ಲಿ ಫಾರೂಕ್, ಮೆಹಬೂಬಾ ಮುಫ್ತಿ ಪಕ್ಷಕ್ಕೆ ಗೆಲುವಿನ ಹಾರ! ಎರಡನೇ ಸ್ಥಾನದಲ್ಲಿ ಬಿಜೆಪಿ

jk 2
Published on

ಶ್ರೀನಗರ: ಜಮ್ಮು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿತ್ತು, ಫಾರೂಕ್​ ಮತ್ತು ಮೆಹಬೂಬ್​ ಮುಪ್ತಿ ಅವರ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ (ಪಿಎಜಿಡಿ) ಗೆಲುವನ್ನು ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಬಿಜೆಪಿ ಕಾಣಿಸಿಕೊಂಡಿದೆ.

ಒಟ್ಟು 280 ನವೆಂಬರ್ 28 ರಿಂದ ಡಿಸೆಂಬರ್ 19 ರವರೆಗೆ ಎಂಟು ಹಂತಗಳಲ್ಲಿ ಮತದಾನ ನಡೆದಿತ್ತು. 57 ಲಕ್ಷ ಅರ್ಹ ಮತದಾರರಲ್ಲಿ ಶೇ. 51.42 ಮಂದಿ ತಮ್ಮ ಮತದಾನವನ್ನು ಚಲಾಯಿಸಿದ್ದರು. ಆ ಮತಗಳ ಎಣಿಕೆಯನ್ನು ಮಂಗಳವಾರದಂದು ಮಾಡಲಾಗಿದೆ. ರಾತ್ರಿ 8 ಗಂಟೆಯವರೆಗೆ ಬಂದಿರುವ ಫಲಿತಾಂಶದ ಪ್ರಕಾರ, ಪಿಎಜಿಡಿ 112 ಕ್ಷೇತ್ರ (82 ಗೆಲುವು, 30 ಮುನ್ನಡೆ), ಬಿಜೆಪಿ 70 ಕ್ಷೇತ್ರ (52 ಗೆಲುವು, 18 ಮುನ್ನಡೆ), ಕಾಂಗ್ರೆಸ್​ 25 ಸ್ಥಾನ (19 ಗೆಲುವು, 9 ಮುನ್ನಡೆ), ಜಮ್ಮು ಕಾಶ್ಮೀರ ಅಪ್ನಿ ಪಾರ್ಟಿ 12 ಕ್ಷೇತ್ರ (7 ಗೆಲುವು, 5 ಮುನ್ನಡೆ) ಮತ್ತು ಇತರೆ ಪಕ್ಷಗಳು ಹಾಗೂ ಪಕ್ಷೇತರರು 56 ಕ್ಷೇತ್ರಗಳಲ್ಲಿ (38 ಗೆಲುವು, 18 ಮುನ್ನಡೆ) ಜಯ ಕಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net