Avatar 3 Review - ಬದಲಾದ ಶತ್ರುಗಳು, ಮುಂದುವರಿದ ಹೋರಾಟ

ಅವತಾರ್ 3
ಅವತಾರ್ 3
Published on
Avatar 3 Review ; ಚಿತ್ರ: ಅವತಾರ್​ 3 & ೈರ್​ ಆ್ಯಂಡ್​ ಆ್ಯಶ್​
ನಿರ್ದೇಶನ: ಜೇಮ್ಸ್​ ಕ್ಯಾಮರೂನ್​
ತಾರಾಗಣ: ಸ್ಯಾಮ್​ ವರ್ದಿಂಗ್ಟನ್​, ಜೋ ಸಲ್ಡಾನಾ, ಸ್ಟೀನ್​ ಲ್ಯಾಂಗ್​, ಸಿಗರ್ನಿ ವೀವರ್​, ಓನಾ ಚಾಪ್ಲಿನ್​, ಕೇಟ್​ ವಿನ್ಸ್​ಲೆಟ್​ ಮತ್ತಿತರರು
ಜೇಮ್ಸ್​ ಕ್ಯಾಮರೂನ್​ ನಿರ್ದೇಶನದ "ಅವತಾರ್​' ಸರಣಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. 2009ರಲ್ಲಿ ಬಿಡುಗಡೆಯಾದ "ಅವತಾರ್​' ಮತ್ತು 2022ರಲ್ಲಿ ತೆರೆಗೆ ಬಂದ "ಅವತಾರ್​ 2& ದ ವೇ ಆ್​ ವಾಟರ್​' ಎರಡೂ ಚಿತ್ರಗಳಿಂದ ಸುಮಾರು ಆರು ಸಾವಿರ ಕೋಟಿ ಬಜೆಟ್​ ಆಗಿತ್ತು. ಎರಡೂ ಚಿತ್ರಗಳ ಕಲೆಕ್ಷನ್​ <50 ಸಾವಿರ ಕೋಟಿ ದಾಟಿತ್ತು. ಆ ಮೂಲಕ ವಿಶ್ವದಲ್ಲೇ ಅತ್ಯಂತ ಯಶಸ್ವಿ ಸರಣಿ ಎನಿಸಿಕೊಂಡಿದೆ. ಇದೀಗ ಸೀಕ್ವೆಲ್​ನ ಮೂರು ವರ್ಷಗಳ ನಂತರ ಟ್ರೀಕ್ವೆಲ್​ "ಅವತಾರ್​ 3& ೈರ್​ ಆ್ಯಂಡ್​ ಆ್ಯಶ್​' ರಿಲೀಸ್​ ಆಗಿದೆ. ಹಾಗಾದರೆ ಹೇಗಿದೆ ಈ ಹೊಸ "ಅವತಾರ್​'?
ಮೊದಲ ಭಾಗದಲ್ಲಿ ಪೆಂಡೋರಾ ಕಳೆದುಕೊಂಡ ಬಳಿಕ ಜೇಕ್​ ಸಲ್ಲಿ (ಸ್ಯಾಮ್​) ತನ್ನ ಕುಟುಂಬದ ಜತೆ ಸಾಗರ ಕುಲದವರಾದ ಮೆಟ್ಕಯೀನಾ ಜನರ ಮೊರೆ ಹೋಗಿ, ಅವರ ಜತೆಗೇ ಉಳಿಯುತ್ತಾರೆ. ಆದರೆ, ಕರ್ನಲ್​ ಮೈಲ್ಸ್​ ಕ್ವಾರಿಚ್​ಗೆ (ಸ್ಟೀನ್​) ವಿಷಯ ಗೊತ್ತಾಗಿ ಅಲ್ಲಿಯೂ ದಾಳಿ ನಡೆಸುತ್ತಾರೆ. ಹಾಗೇ ನಾವಿ ಮತ್ತು ಮೆಟ್ಕಯೀನಾ ಕುಲದವರು ಪೂಜಿಸುವ ತಿಮಿಂಗಿಲಗಳಂತಿರುವ ಟುಲ್ಕುನ್​ಗಳನ್ನು ಜನ ಅಮೃತಕ್ಕಾಗಿ ಬೇಟೆಯಾಡತೊಡಗುತ್ತಾರೆ. ಹೀಗಾಗಿ ಎರಡನೇ "ಅವತಾರ್​'ನಲ್ಲೂ ಮನುಷ್ಯ ಮತ್ತು ನಾವಿಗಳ (ಅವತಾರ್​) ನಡುವಿನ ಸಂರ್ಷ ಮುಂದುವರಿಯುತ್ತದೆ. ಇದೀಗ ಈ ಸಂರ್ಷ ಮೂರನೇ ಭಾಗದಲ್ಲೂ ಮುಂದುವರಿದಿದ್ದು, ಇಲ್ಲಿ ಕರ್ನಲ್​ ಕ್ವಾರಿಚ್​ಗೆ ಬೂದಿ ಕುಲದ ಅವತಾರ್​ಗಳು ಜತೆಯಾಗಿದ್ದಾರೆ. ಜತೆಗೆ ಅವತಾರ್​ಗಳ ಜತೆಗೇ ಉಳಿಯುವ ಪುತ್ರ ಸ್ಪೆ$ಡರ್​ನ ವಾಪಸ್​ ಕರೆದೊಯ್ಯಲು ಕರ್ನಲ್​ ಕ್ವಾರಿಚ್​ ಪ್ರಯತ್ನಿಸುತ್ತಾನೆ. ಹೀಗೆ ಮಾನವ ಮತ್ತು ಅವತಾರ್​ಗಳ ನಡುವಿನ ಸಂರ್ಷ ಒಂದೆಡೆಯಾದರೆ, ಅವತಾರ್​ಗಳ ನಡುವಿನ ಸಂರ್ಷ ಮತ್ತೊಂದೆಡೆ ಹಾಗೂ ಮಾನವರ ನಡುವಿನ ಸಂರ್ಷ ಇನ್ನೊಂದೆಡೆ ನಡೆಯುತ್ತಿರುತ್ತದೆ. ಗೆಳೆತನ, ಪ್ರೀತಿ, ಕುಟುಂಬದ ಮೌಲ್ಯಗಳು ಹೀಗೆ ನೀತಿಪಾಠ ಇಲ್ಲೂ ಮುಂದುವರಿದಿದೆ. ನೀಲಿ ಸಮುದ್ರದ ಆಳದಲ್ಲಿ, ನೀಲಾಕಾಶದಲ್ಲಿ, ನೀಲಿ ಜನರ ಈ ಸುದೀರ್ ಕಥೆ ದೃಶ್ಯವೈಭವದಂತೆಯೇ ಸಾಗುತ್ತದೆ. ಆದರೆ, ಅದ್ಭುತ ಎನ್ನಿಸುವ ಅಂಶಗಳಿಲ್ಲ. ಹೀಗಾಗಿ 197 ನಿಮಿಷಗಳ "ಅವತಾರ್​ 3 & ೈರ್​ ಆ್ಯಂಡ್​ ಆ್ಯಶ್​' ದೀರ್, ಸುದೀ ಎನ್ನಿಸುತ್ತದೆ. ಹುಟ್ಟು, ಮರುಹುಟ್ಟುಗಳ ಆಟದ ಈ ಟ್ರೀಕ್ವೆಲ್​ನಲ್ಲೂ ಮುಂದುವರಿದಿದೆ. ಒಟ್ಟಾರೆ ಈ ಹೊಸ ಅವತಾರದಲ್ಲೂ ಹೋರಾಟ ಮುಂದುವರಿದಿದ್ದು, ಶತ್ರುಗಳಷ್ಟೇ ಬದಲಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net