ಅನುದಾನ ಸಮರ್ಪಕ ಬಳಕೆಯಾಗಲಿ

IMG-20231012-WA0161_1
Published on

ಸಾಲಿಗ್ರಾಮ: ಸರ್ಕಾರದ ಅನುದಾನಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಮರ್ಪಕವಾಗಿ ಬಳಕೆ ಆದರೆ ಹಳ್ಳಿಗಳು ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ತಾಪಂ ಇಒ ಹರೀಶ್ ತಿಳಿಸಿದರು. ತಂದ್ರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಮಾಬಂದಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳು ಸಕಾಲದಲ್ಲಿ ಸಾರ್ವಜನಿಕರಿಗೆ ತಲುಪಬೇಕು. ಈ ದಿಸೆಯಲ್ಲಿ ಗ್ರಾಪಂ ಆಡಳಿತ ಸೂಕ್ತವಾಗಿ ಜವಾಬ್ದಾರಿ ನಿರ್ವಹಿಸಬೇಕು. ತಂದ್ರೆ ಗ್ರಾಪಂನಲ್ಲಿ ಯಾವುದೇ ತೊಡಕು ಇಲ್ಲ. ಇಂತಹ ಗ್ರಾಪಂಗಳಿಗೆ ತಾಪಂನಿಂದ ಇನ್ನಷ್ಟು ಅನುದಾನವನ್ನ ನೀಡಲಾಗುತ್ತದೆ ಎಂದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾದೇವ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ಎಲ್ಲರ ಸಹಕಾರದಿಂದ ಅಭಿವೃದ್ಧಿಯತ್ತ ಸಾಗುತ್ತಿದೆ. ವರ್ಷದಲ್ಲಿ ನಡೆದಿರುವ ಯೋಜನೆಗಳು ಮತ್ತು ಖರ್ಚು ವೆಚ್ಚಗಳನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ಓದಿ ತಿಳಿಸಲಾಗುತ್ತಿದೆ ಎಂದರು. ಗ್ರಾಪಂ ಅಧ್ಯಕ್ಷೆ ರೇಣುಕಾ ವೆಂಕಟೇಶ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಹೊರತುಪಡಿಸಿ ಉಳಿದ ಅವಧಿಯಲ್ಲಿ ಎಲ್ಲರೂ ಅಭಿವೃದ್ಧಿ ಕೆಲಸಗಳಿಗೆ ಪಕ್ಷಾತೀತವಾಗಿ ಸಹಕಾರ ನೀಡುತ್ತಿದ್ದಾರೆ ಎಂದರು. ಗ್ರಾಮ ಪಂಚಾಯತಿಯನ್ನು ಮಾದರಿ ಮಾಡಲು ಎಲ್ಲರೂ ಸಂಕಲ್ಪ ಮಾಡಿದ್ದೇವೆ. ತಾಪಂನಿಂದ ಹೆಚ್ಚುವರಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷ ಮುದುಗುಪ್ಪೆ ಮಹದೇವ, ಸದಸ್ಯರಾದ ಪಾಪೇಗೌಡ, ಮಾದೇವಪ್ಪ, ಪ್ರಮೀಳಾ ರಮೇಶ್, ಸುನೀತಾ ಸ್ವಾಮಿ, ಅನಿತಾ ಕೀರ್ತಿ, ಪವಿತ್ರಾ, ಸಣ್ಣಸ್ವಾಮಿ, ಎಂ.ಕೆ. ಮಾದು, ಯೋಗಣ್ಣ, ಸಿಬ್ಬಂದಿ ಸುಂದರೇಗೌಡ, ಪ್ರಸನ್ನ, ಚಂದ್ರಶೇಖರ್, ರಾಮಕೃಷ್ಣ, ವೆಂಕಟೇಶನಾಯಕ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net