ಹಂತಿಮ ಹಂತಕ್ಕೆ ಜಲಸಿರಿ ಯೋಜನೆ

 2027ರ ಆಗಸ್ಟ್ ವೇಳೆಗೆ ಮನೆಗಳಿಗೆ ನೀರಿನ ಪೈಪ್‌ಲೈನ್ ಸಂಪರ್ಕ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ಸಂಸ್ಥೆಯಾದ ಮೆಸರ್ಸ್ ಸುಯೆಜ್ ಪ್ರಾಜೆಕ್ಟ್ಸ್ ಪ್ರೈ. ಲಿ.ನ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
2027ರ ಆಗಸ್ಟ್ ವೇಳೆಗೆ ಮನೆಗಳಿಗೆ ನೀರಿನ ಪೈಪ್‌ಲೈನ್ ಸಂಪರ್ಕ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ಸಂಸ್ಥೆಯಾದ ಮೆಸರ್ಸ್ ಸುಯೆಜ್ ಪ್ರಾಜೆಕ್ಟ್ಸ್ ಪ್ರೈ. ಲಿ.ನ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
Published on
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ 24*7 ನೀರು ಪೂರೈಕೆಯ ಜಲಸಿರಿ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. 2027ರ ಆಗಸ್ಟ್ ವೇಳೆಗೆ ಮನೆಗಳಿಗೆ ನೀರಿನ ಪೈಪ್‌ಲೈನ್ ಸಂಪರ್ಕ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ಸಂಸ್ಥೆಯಾದ ಮೆಸರ್ಸ್ ಸುಯೆಜ್ ಪ್ರಾಜೆಕ್ಟ್ಸ್ ಪ್ರೈ. ಲಿ.ನ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಮಂಗಳೂರಿನ ನಾನಾ ಕಡೆ ನಡೆಯುತ್ತಿರುವ ಕಾಮಗಾರಿ ಹಾಗೂ ಕೋಡಿಕಲ್‌ನಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಿಲಾಗಿರುವ ಡಬಲ್ ಸ್ಟೋರೇಜ್ ಟ್ಯಾಂಕ್ (40 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯ)ನ ಪ್ರದೇಶಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ದು ಮಾಹಿತಿ ನೀಡಿದ ಅಧಿಕಾರಿಗಳು 2027ರ ಮಾರ್ಚ್‌ವರೆಗೆ ಜಲಸಿರಿ ಯೋಜನೆಯ ಕಾಮಗಾರಿ ಪೈಪ್‌ಲೈನ್ ಅಳವಡಿಕೆ, ಟ್ಯಾಂಕ್‌ಗಳ ನಿರ್ಮಾಣ ಹಾಗೂ ಅಡ್ಯಾರ್‌ನಲ್ಲಿ ನಡೆಯುತ್ತಿರುವ ನೀರು ಶುದ್ಧೀಕರಣ ಘಟಕ (ಡಬ್ಯುಟಿಪಿ)ವನ್ನು ಅಂತಿಮಗೊಳಿಸಲು ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ 24*7 ನೀರು ಸರಬರಾಜು ಯೋಜನೆಯಡಿ 1288.8 ಕಿ.ಮೀ. ನೀರು ಪೂರೈಕೆ ಜಾಲ, 19 ಓವರ್ ಹೆಡ್‌ಟ್ಯಾಂಕ್‌ಗಳ ನಿರ್ಮಾಣ, 6 ಜಿಎಲ್‌ಎಸ್‌ಆರ್ ಹಾಗೂ 7 ಪಂಪಿಂಗ್ ಹೌಸ್‌ಗಳ ನಿರ್ಮಾಣದ ಜತೆಗೆ ಮಲ್ಟಿ ಜೆಟ್ ವಾಟರ್ ಮೀಟರ್‌ನೊಂದಿಗೆ 96,300 ಗೃಹ ಬಳಕೆಯ ಸಂಪರ್ಕ ಒದಗಿಸುವುದು, 81.7 ಎಂಎಲ್‌ಡಿ ಫಿಲ್ಟರ್, ಪಂಪ್‌ಹೌಸ್ ನಿರ್ಮಾಣ ಕಾಮಗಾರಿ ಜಲಸಿರಿ ಯೋಜನೆಯಡಿ ಒಳಗೊಂಡಿದೆ. ಯೋಜನೆ ಪೂರ್ಣಗೊಂಡ ಬಳಿಕ ನೀರು ಪೂರೈಕೆ ಹಾಗೂ ನಿರ್ವಹಣಾ ಕಾರ್ಯವನ್ನು 8 ವರ್ಷಗಳ ಅವಧಿಗೆ ಸೂಯೆಜ್ ಕಂಪನಿ ನಿರ್ವಹಿಸಲಿದೆ.
ಸೂಯೆಜ್ ಕಂಪನಿಯ ಉನ್ನಿಕೃಷ್ಣ, ಆಡಳಿತ ವಿಭಾಗದ ರಾಕೇಶ್ ಶೆಟ್ಟಿ, ಸುಯೆಜ್ ಪ್ರೈ. ಲಿನ ಹೈಜ್ರಾಲಿಕ್ ಡಿಸೈನ್ ಎಂಜಿನಿಯರ್ ಅಮಿತ್ ಕುಮಾರ್, ವ್ಯವಸ್ಥಾಪಕರಾದ ಉದಯ್ ಕುಮಾರ್, ಕೆಯುಐಡಿಎ್ಸಿ ಕಾರ್ಯ ನಿರ್ವಾಹಕ ಎಂಜಿನಿಯರ್ ಸುರೇಶ್ ಎ.ಎಚ್. ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net