ಎಲ್ಲಿ ಹೋದನೇ ಸಖಿ?; ಮಲೆನಾಡು ಉತ್ಸವದಲ್ಲಿ ಜಲಪಾತದ ಎರಡನೇ ಹಾಡು ರಿಲೀಸ್

jalapata
Published on

ಬೆಂಗಳೂರು: ರಮೇಶ್ ಬೇಗಾರ್ ನಿರ್ದೇಶಿಸುತ್ತಿರುವ ಪರಿಸರ ಕಾಳಜಿಯ ಕುರಿತಾದ ಚಿತ್ರ ‘ಜಲಪಾತ’. ಈ ಚಿತ್ರಕ್ಕೆ ನಾಗಶ್ರೀ ಬೇಗಾರ್ ನಾಯಕಿ ಹಾಗೂ ರಜನೀಶ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದ್ದು, ಇದೀಗ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ. ಇತ್ತೀಚೆಗೆ ಎಚ್.ಎನ್ ಕಲಾಕ್ಷೇತ್ರದಲ್ಲಿ ನಡೆದ ಮಲೆನಾಡು ಉತ್ಸವ ಕಾರ್ಯಕ್ರಮದಲ್ಲಿ ನಟಿ, ಮಾಜಿ ಸಚಿವೆ ಜಯಮಾಲ ಸಾಂಗ್ ರಿಲೀಸ್ ಮಾಡಿ, ‘ನಾನು ಕೂಡ ಮಲೆನಾಡಿನವಳು. ಈ ಚಿತ್ರದ ಆಶಯ ಮೆಚ್ಚುವಂಥದ್ದು. ಸಿನಿಮಾ ಯಶಸ್ವಿ ಆಗುತ್ತದೆ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಎಲ್ಲಿ ಹೋದನೇ ಸಖಿ’ ಎಂದು ಸಾಗುವ ಈ ಹಾಡಿಗೆ ವನಿತಾ ವೆಂಕಟೇಶ್ ಸಾಹಿತ್ಯ ಬರೆದಿದ್ದು, ಸಾದ್ವಿನಿ ಕೊಪ್ಪ ಹಾಗೂ ಶ್ರೀನಿಧಿ ಶಾಸಿ ಹಾಡಿದ್ದಾರೆ. ನಾಗಶ್ರೀ ಹಾಗೂ ರಜನೀಶ್ ಜತೆಗೆ ಪ್ರಮೋದ್ ಶೆಟ್ಟಿ, ರೇಖಾ ಪ್ರೇಮ್ ಕುಮಾರ್, ರಶ್ಮಿ ಹೆರ್ಳೆ ಮುಖ್ಯ ತಾರಾಬಳಗದಲ್ಲಿದ್ದಾರೆ. ಇದೇ ಮಾಸಾಂತ್ಯಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.

ಮಲೆನಾಡು ಉತ್ಸವ:
ಬೆಂಗಳೂರಿನ ಮಲೆನಾಡಿಗರನ್ನೆಲ್ಲ ಒಂದೇ ಸೂರಿನಡಿ ಒಗ್ಗೂಡಿಸುವ ವಿಶೇಷ ಕಾರ್ಯಕ್ರಮ. ಪರಿಸರ ಕಾಳಜಿಯ ಕುರಿತಾದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಸುಗಮ ಹಾಗೂ ಚಲನಚಿತ್ರ ಗೀತೆಗಳ ಕಾರ್ಯಕ್ರಮ, ಯಕ್ಷಗಾನ, ಯುವ ಹಾಗೂ ಹಿರಿಯ ಸಾಧಕರಿಗೆ ಸನ್ಮಾನ ಹಾಗೂ ವಿಶೇಷವಾಗಿ ಜಲಪಾತ ಸಿನಿಮಾದ ಬಗ್ಗೆ ಪರಿಚಯಿಸುವ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net