ಜಕ್ಕೂರು ಕೆರೆ ನಿರ್ವಹಣೆ ವೈಲ್ಯ;ಲೋಕಾಯು ಕೇಸ್

lokayukta-1704779717
Published on

ಬೆಂಗಳೂರು: ಜಕ್ಕೂರಿ ಕೆರೆ ನಿರ್ವಹಣೆ ಮತ್ತು ಒತ್ತುವರಿ ತೆರವು ಮಾಡುವಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರು ಜಕ್ಕೂರು ಕೆರೆ ಅಂಗಳಕ್ಕೆ ಖುದ್ದು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಕೆರೆ ಒತ್ತುವರಿ, ಕೊಳಚೆ ನೀರು ಹರಿದು ಬರುತ್ತಿರುವುದು ಸೇರಿ ಕೆರೆ ನಿರ್ವಹಣೆಯಲ್ಲಿ ಲೋಪ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಬಿಬಿಎಂಪಿ ಯಲಹಂಕ ವಲಯ ಆಯುಕ್ತ ಕರಿಗೌಡ, ಜಂಟಿ ಆಯುಕ್ತ ಮೈನ್, ಕೆರೆಗಳ ಮುಖ್ಯ ಇಂಜಿನಿಯರ್ ವಿಜಯಕುಮಾರ್ ಹರಿದಾಸ್, ಜಲಮಂಡಳಿ ಮುಖ್ಯ ಇಂಜಿನಿಯರ್ ದೇವರಾಜ್, ಯಲಹಂಕ ಕೆರೆ ವಿಭಾಗ ಕಾರ್ಯಾನಿರ್ವಹಕ ಇಂಜಿನಿಯರ್ ಮಹದೇವ್, ಜಲಮಂಡಳಿ ಡಿಸಿ ವರ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್, ರಾಜಶೇಖರ್ ಮೇಟಿ, ಕೆಎಸ್‌ಪಿಸಿಬಿಯ ಚಂದ್ರಕಾಂತಿ ಮತ್ತು ಕೊಳಚೆ ನೀರು ನಿರ್ವಹಣ ವಿಭಾಗ ಸಹಾಯಕ ಇಂಜಿನಿಯರ್ ಪ್ರಶಾಂತ್ ವಿರುದ್ಧ ಕೇಶ್ ದಾಖಲಾಗಿದೆ.

ಈ ಎಲ್ಲ ಅಧಿಕಾರಿಗಳಿಗೆ ಕೆರೆ ಅಭಿವೃದ್ಧಿ ಕುರಿತು ಪ್ರತ್ಯೇಕ ಆದೇಶ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡಿರುವ ಕಾಮಗಾರಿಯ ವರದಿ ಜತೆಗೆ ಅಕ್ಟೋಬರ್ 14ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟು ಮುಂದಿನ ವಿಚಾರಣೆಯನ್ನು ಅ.29ಕ್ಕೆ ಮುಂದೂಡಿದ್ದಾರೆ. ಎಲ್ಲ ಅಧಿಕಾರಿಗಳು ಖುದ್ದು ಹಾಜರಾತಿಗೆ ಲೋಕಾಯುಕ್ತರು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net