ಜಕಣಾಚಾರಿ ವಿಶ್ವಮಾನ್ಯ ಕಲಾವಿದ

01 SARAG 14
Published on

ಸರಗೂರು : ಶಿಲ್ಪಕಲಾ ಕ್ಷೇತ್ರಕ್ಕೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅನನ್ಯ ಎಂದು ಉಪನ್ಯಾಸಕ ಸಿದ್ದಲಿಂಗ ಸ್ವಾಮಿ ಹೇಳಿದರು.
ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಜಕಣಾಚಾರಿ ಜಯಂತಿಯಲ್ಲಿ ಅವರು ಮಾತನಾಡಿದರು. ಹೊಯ್ಸಳ ಅರಸ ವಿಷ್ಣುವರ್ಧನ ಮತ್ತು ರಾಣಿ ಶಾಂತಲೆಯರ ಆಶಯದಂತೆ ಬೇಲೂರು ಚನ್ನಕೇಶವ ದೇವಾಲಯದ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡ ಜಕಣಾಚಾರಿ
ದೇಗುಲವನ್ನು ವಿಶ್ವದ ಅದ್ಭುತ ಕಲಾ ತಾಣವಾಗಿ ರೂಪಿಸಿದರು. ಇದಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟರು. ಇಲ್ಲಿ ಒಂದೊಂದು ಕಲ್ಲುಗಳೂ ಪುರಾಣ, ಇತಿಹಾಸವನ್ನು ಸಾರುವಲ್ಲಿ ಮಹತ್ವದ ಕಲಾಕೃತಿಗಳಾಗಿವೆ ಎಂದರು.
ತಹಸೀಲ್ದಾರ್ ರುಕೀಯಾ ಬೇಗಂ ಮಾತನಾಡಿ, ನಮ್ಮ ನಾಡಿನ ಮಹಾ ಶಿಲ್ಪಿಯನ್ನು ಸ್ಮರಿಸುವುದೇ ಒಂದು ಸಂಭ್ರಮ ಎಂದರು.
ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಜಿ. ರವಿ ಮಾತನಾಡಿ. ನಮ್ಮ ಸಮುದಾಯ ಪಂಚ ಕಸುಬು ಅವಲಂಬಿಸಿದೆ. ಜಕಣಾಚಾರಿ ಕಾಲ್ಪನಿಕ ವ್ಯಕ್ತಿ ಅಲ್ಲ. ಅವರು ವಿಶ್ವಕರ್ಮ ಸಮುದಾಯದ ವಿಶ್ವ ಶ್ರೇಷ್ಠ ಶಿಲ್ಪಕಲಾ ಚತುರ ಎಂದರು. ವಿಶ್ವಕರ್ಮ ಸೇನಾ ಸಮಿತಿ ಅಧ್ಯಕ್ಷ ಎಸ್. ಲೋಕೇಶ್, ಕಾರ್ಯದರ್ಶಿ ಬಾಡಗ ಗೊವಿಂದರಾಜು, ಶಿರಸ್ತೇದಾರ್ ಗುರುರಾಜು, ಉಪ ತಹಸೀಲ್ದಾರ್ ಸುನೀಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net