ಬೆಂಗಳೂರು: (Jainism is not limited only to Jains) ಜೈನಧರ್ಮ ಮತ್ತು ದರ್ಶನ ಕೇವಲ ಜೈನರಿಗಲ್ಲ. ಅದು ಎಲ್ಲ ಧರ್ಮದ ಜನರಿಗಾಗಿ ಇರುವಂತಹದ್ದು ಎಂದು ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಠಾರಿಯ ಅಭಿಪ್ರಾಯಪಟ್ಟಿದ್ದಾರೆ.
ತ್ಯಾಗಿ ಸೇವಾ ಸಮಿತಿ ಹಾಗೂ ಚಕ್ರೇಶ್ವರಿ ಮಹಿಳಾ ಸಮಾಜ, ಶ್ರೀ ಆನೇಕಾಂತ ಸಾಗರ ಮುನಿಗಳ ಮಾರ್ಗದರ್ಶನದಲ್ಲಿ ಭಾನುವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಶ್ರೀಸಿದ್ಧ ನವಗ್ರಹ ತೀರ್ಥಂಕರರ ಮಹಾ ಆರಾಧನಾ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೈನ ಮುನಿಗಳ ದರ್ಶನ ಮಾಡುವುದು ಪೂರ್ವಜನ್ಮದ ಪುಣ್ಯ. ರಾಜ್ಯಪಾಲರ ಪದವಿ ಇರುತ್ತದೆ ಹೋಗುತ್ತದೆ. ಆದರೆ, ಸಾಮಾನ್ಯ ನಾಗರಿಕನಾಗಿ ಜನತೆ ಸೇವೆ ಮಾಡಲು ನಾನು ತಯಾರಿದ್ದೇನೆ. ಜೈನ ಮುನಿಗಳು ಸರ್ವಜನರ ಶಾಂತಿಗೆ, ನಾಡಿನ ಸುಖ ಸಮೃದ್ಧಿಗಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಆರಾಧನೆ ಮಾಡಿಸುತ್ತಿರುವುದು ಸಂತಸ ತಂದಿದೆ ಎಂದರು.
1008 ದಂಪತಿಗಳು ನವಗ್ರಹ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ತ್ಯಾಗಿ ಸೇವಾ ಸಮಿತಿ ಅಧ್ಯಕ್ಷ ಧ. ಸುರೇಂದ್ರಕುಮಾರ, ಅವರ ಪತ್ನಿ ಅನಿತಾ ಸುರೇಂದ್ರಕುಮಾರ, ಜೈನ ಭಟ್ಟಾರಕರು, ಮುನಿಗಣ ಸೇರಿ ಮತ್ತಿತರರಿದ್ದರು.