ಒಟಿಟಿಯಲ್ಲೂ ಟ್ರೆಂಡ್​ ಆಯ್ತು ರಜನಿಕಾಂತ್​ ನಟನೆಯ 'ಜೈಲರ್'​!

Untitled design - 2023-09-09T194731.959
Published on

ತಮಿಳುನಾಡು: ಕಾಲಿವುಡ್​ನ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ ಜೈಲರ್​ ಚಿತ್ರವು ಆಗಸ್ಟ್​ 10 ರಂದು ಜಾಗತಿಕವಾಗಿ ಬಿಡುಗಡೆಗೊಂಡು ಇದೀಗ ಬ್ಲಾಕ್​ಬಸ್ಟರ್​ ಸಿನಿಮಾವಾಗಿ ಹೊರಹೊಮ್ಮಿದೆ. ಬಾಕ್ಸ್​ ಆಫೀಸ್​ನಲ್ಲಿ ದಾಖಲೆಗಳನ್ನು ಬರೆದ ಚಿತ್ರ, ಸಿನಿಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಮೊದಲ ದಿನದಿಂದಲೂ ಟ್ರೆಂಡಿಂಗ್​ನಲ್ಲಿದ್ದ ಜೈಲರ್​, ಒಟಿಟಿಗೆ ಲಗ್ಗೆಯಿಟ್ಟ ನಂತರವೂ ಟ್ರೆಂಡ್​ ಆಗಿರುವುದು ಇದೀಗ ತಲೈವಾ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ಜಾಗತಿಕವಾಗಿ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ ಚಿತ್ರ, ಅಮೇಜಾನ್​ ಪ್ರೈಮ್​ ವಿಡಿಯೋ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಕೂಡ ಮುಂಚೂಣಿಯಲ್ಲಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ, ಮೋಹನ್ ಲಾಲ್, ಶಿವರಾಜ್‌ಕುಮಾರ್, ತಮನಾ ಭಾಟಿಯಾ, ರಮ್ಯಾ ಕೃಷ್ಣ, ಜಾಕಿ ಶ್ರಾಫ್, ಮಿರ್ನಾ ಮೆನನ್, ಸುನೀಲ್, ನಾಗ ಬಾಬು, ಯೋಗಿ ಬಾಬು, ವಸಂತ ರವಿ ಮುಂತಾದವರ ತಾರಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net