

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಹೆಸರನ್ನು ‘ಇಂಡಿಯಾ’ ಬದಲಾಗಿ ‘ಭಾರತ’ವೆಂದು ಬಳಸಬೇಕು ಎಂಬ ವಿಷಯ ಸಾಕಷ್ಟು ಚರ್ಚೆಯಲ್ಲಿದೆ. ಇದರ ಪರಿಣಾಮ ಇದೀಗ ಚಿತ್ರರಂಗ ಹಾಗೂ ಚಿತ್ರಗಳ ಮೇಲೆ ಬಿದ್ದಿದೆ. ಇದಕ್ಕೆ ಉದಾಹರಣೆ ಎಂಬಂತೆ ಅಕ್ಷಯ್ ಕುಮಾರ್ ಅಭಿನಯದ ಚಿತ್ರದ ಟೈಟಲ್‌ನಲ್ಲಿ ಬದಲಾವಣೆ ಮಾಡಲಾಗಿದೆ.
ಹೌದು, ಟೀನು ಸುರೇಶ್ ದೇಸಾಯಿ ಆ್ಯಕ್ಷನ್-ಕಟ್ ಹೇಳುತ್ತಿರುವ ಅಕ್ಟೋಬರ್ 6ಕ್ಕೆ ರಿಲೀಸ್ ಆಗುತ್ತಿರುವ ನೈಜ ಘಟನೆಯಾಧಾರಿತ ಚಿತ್ರ ‘ಮಿಷನ್ ರಾಣಿಗಂಜ್’. 1989ರಲ್ಲಿ ಪಶ್ಚಿಮ ಬಂಗಾಳದ ರಾಣಿಗಂಜ್ ಗಣಿಯಲ್ಲಿ ಭೂಕುಸಿತ ಉಂಟಾಗಿ 65 ಜನರ ಗಣಿ ಕಾರ್ಮಿಕರು ಸಿಲುಕಿಕೊಳ್ಳುತ್ತಾರೆ. ಆಗ ಸ್ವಂತ್ ಸಿಂಗ್ ಗಿಲ್ ಎಂಬ ಮೈನಿಂಗ್ ಇಂಜಿನಿಯರ್ ಅವರನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಕಥೆ ಹೆಣೆಯಲಾಗಿದೆ. ಜಸ್ವಂತ್ ಗಿಲ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡರೆ, ಅವರಿಗೆ ಜೋಡಿಯಾಗಿ ಪರಿಣೀತಿ ಚೋಪ್ರಾ ಅಭಿನಯಿಸಿದ್ದಾರೆ.
ಇದನ್ನೂ ಓದಿ : 2024ಕ್ಕೆ ಪ್ರಭಾಸ್ ನಟನೆಯ ‘ಸಲಾರ್’ ರಿಲೀಸ್?
ಈ ಹಿಂದೆ ಈ ಚಿತ್ರಕ್ಕೆ ‘ಕ್ಯಾಪ್ಸೂಲ್ ಗಿಲ್’ ಎಂಬ ಟೈಟಲ್ ಇಡಲಾಗಿತ್ತು. ಇತ್ತೀಚೆಗಷ್ಟೆ ಚಿತ್ರಕ್ಕೆ ‘ಮಿಷನ್ ರಾಣಿಗಂಜ್’ ಎಂದು ಶೀರ್ಷಿಕೆ ಬದಲಿಸಿರುವ ಚಿತ್ರತಂಡ, ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಎಂಬ ಅಡಿಬರಹವನ್ನು ‘ದಿ ಗ್ರೇಟ್ ಭಾರತ ರೆಸ್ಕ್ಯೂ’ ಎಂದು ಬದಲಿಸಿದೆ. ಸಿನಿಮಾ ಇದೇ ಅ. 6ರಂದು ರಿಲೀಸ್ ಆಗಲಿದೆ. -ಏಜೆನ್ಸೀಸ್