More

    Kaddha Chitra Movie Review: ಕೃತಿ ಚೌರ್ಯದ ಹಿಂದೊಂದು ಸಸ್ಪೆನ್ಸ್

    ಪ್ರಮೋದ ಮೋಹನ ಹೆಗಡೆ

    ಚಿತ್ರ: ಕದ್ದ ಚಿತ್ರ
    ನಿರ್ದೇಶನ: ಸುಹಾಸ್ ಕೃಷ್ಣ
    ನಿರ್ಮಾಣ: ಸಂದೀಪ್ ಎಚ್.ಕೆ
    ತಾರಾಗಣ: ವಿಜಯ್ ರಾಘವೇಂದ್ರ, ನಮೃತಾ ಸುರೇಂದ್ರನಾಥ್, ರಾಘು ಶಿವಮೊಗ್ಗ, ಬೇಬಿ ಆರಾಧ್ಯ ಮುಂತಾದವರು
    ಸ್ಟಾರ್: 3

    ‘ಕಲಿತ ವಿದ್ಯೆಯನ್ನು ಕದಿಯೋಕ್ಕಾಗಲ್ಲ ಅಂತಾರೆ. ಆದರೆ, ನೀನು ಕದಿಯೋದನ್ನೇ ಚೆನ್ನಾಗಿ ಕಲ್ತಿದ್ದೀಯಾ’ ಎಂಬ ಮಾತನ್ನು ಒಬ್ಬ ಹೆಸರಾಂತ ಪ್ರಕಾಶಕ ಲೇಖಕನಿಗೆ ಹೇಳುತ್ತಾನೆ. ಹೌದು, ಇದು ಕೃತಿ ಚೌರ್ಯದ ಆರೋಪವನ್ನು ಎದುರಿಸಿ ಅವಮಾನಕ್ಕೊಳಗಾದ ಒಬ್ಬ ಲೇಖಕನ ಕಥೆ. ಲೇಖಕ ಆದವನಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂತಹ ಒಂದು ಸಮಸ್ಯೆ ಎದುರಾಗಬಹುದು. ತಾವು ಬರೆದ ಯಾವುದೋ ಒಂದು ಕಥೆ ಕಾಕತಾಳೀಯ ಎಂಬಂತೆ ಇನ್ನೊಬ್ಬರ ಕೃತಿಯ ಕಥೆಗೆ ಸಾಮ್ಯತೆ ಇರಬಹುದು. ಇಂತಹದೊಂದು ಸಮಸ್ಯೆಯನ್ನು ಎದುರಿಸುವ ಬರಹಗಾರನ ಕಥೆ ‘ಕದ್ದ ಚಿತ್ರ’.

    ಇದನ್ನೂ ಓದಿ: ಕೃಷ್ಣ ರಾಧೆಯರಾದ ತಾರೆಯರ ಮಕ್ಕಳು ; ಸ್ಯಾಂಡಲ್‌ವುಡ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂಭ್ರಮ

    ವಿಜಯ್ ಕ್ಷತ್ರಿಯ (ವಿಜಯ್ ರಾಘವೇಂದ್ರ) ಅದ್ಭುತ ಬರಹಾಗರ. ಆತ ತನ್ನ ಬರವಣಿಗೆಯಿಂದ ಯಾರನ್ನೂ ತನ್ನತ್ತ ಸೆಳೆಯಬಲ್ಲ ಶಕ್ತಿ ಇರುವವನು. ರಾತ್ರೋರಾತ್ರಿ ಬೆಸ್ಟ್ ಸೆಲ್ಲರ್ ಸಾಲಿಗೆ ಸೇರುತ್ತಾನೆ. ಆದರೆ, ಅದರ ಬೆನ್ನಲ್ಲೇ ಆತನ ಮೇಲೆ ಆರೋಪ ಕೃತಿ ಚೌರ್ಯದ ಆರೋಪ ಕೇಳಿಬರುತ್ತದೆ. ಜನರೆಲ್ಲರೂ ಅವಮಾನಿಸುತ್ತಾರೆ. ಬರವಣಿಗೆಗೆ ಬೆಂಬಲಿಸಿದ, ಪ್ರೀತಿಸಿ ಮದುವೆಯಾದ ಹೆಂಡತಿ ಆತನಿಂದ ದೂರವಾಗುತ್ತಾಳೆ. ಈ ಎಲ್ಲದರಿಂದ ಒಂದು ಬ್ರೇಕ್ ಪಡೆಯಲು ದೂರದೂರಿನಲ್ಲಿರುವ ಗೆಳೆಯನ ಗೆಸ್ಟ್ ಹೌಸ್‌ಗೆ ಹೋಗುತ್ತಾನೆ ವಿಜಯ್. ಅಲ್ಲಿಂದ ನಿಜವಾದ ಕಥೆ ಶುರು ಆಗುತ್ತದೆ. ಅಲ್ಲಿಯವರೆಗೆ ಒಂದು ಡ್ರಾಮಾ ಅಂತನಿಸುವ ಕಥೆ ಸಸ್ಪೆನ್ಸ್ ರೂಪ ಪಡೆದುಕೊಳ್ಳುತ್ತದೆ. ತನ್ನ ಮೇಲಿರುವ ಆರೋಪವನ್ನು ನಾಯಕ ಹೇಗೆ ಜಾಣ್ಮೆಯಿಂದ ಅಪರಾಧಿಯನ್ನು ಸೆರೆ ಹಿಡಿಯಲು ಬಳಸಿಕೊಳ್ಳುತ್ತಾನೆ ಎನ್ನುವ ಅಂಶವನ್ನು ಚಿತ್ರವಾಗಿಸದ್ದಾರೆ ನಿರ್ದೇಶಕ ಸುಹಾಸ್ ಕೃಷ್ಣ.

    ಇದನ್ನೂ ಓದಿ: ರಾಜಕೀಯಕ್ಕೆ ಸಮಂತಾ? ಕುತೂಹಲ ಮೂಡಿಸಿದೆ ದಕ್ಷಿಣ ಭಾರತದ ಟಾಪ್​ ನಟಿಯ ನಡೆ

    ಹಾಡುಗಳು, ಮನೋಹರ ಸ್ಥಳಗಳ ದೃಶ್ಯಗಳ ನಡುವೆ ಮೊದಲರ್ಧ ಭಾಗ ನಿಧಾನವಾಗಿ ಸಾಗುತ್ತಾ ಲೇಖಕ ವಿಜಯ್ ಕ್ಷತ್ರಿಯ ಹೇಗೆಲ್ಲ ಏರು ಪೇರುಗಳನ್ನು ನೋಡುತ್ತಾನೆ ಎನ್ನುವುದನ್ನು ಪರಿಚಯಿಸುತ್ತದೆ. ದ್ವಿತೀಯಾರ್ಧದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಕಥೆ ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಂಟರ್‌ವಲ್ ಅದ ಬಳಿಕವೇ ಚಿತ್ರದ ಮತ್ತೊಂದು ಆಯಾಮ ಅನಾವರಣ ಆಗುತ್ತದೆ. ತಳಮಳ, ಗೊಂದಲ ಹಾಗೂ ಅವಮಾನವಾದಾಗ ಹತಾಶೆ, ತನ್ನವರು ಬಿಟ್ಟು ಹೋದಾಗ ವಿಷಾದ, ಕೋಪ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವ ಲೇಖಕನ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಮಿಂಚಿದ್ದಾರೆ. ಅವರಿಗೆ ಜೋಡಿಯಾಗಿ ನಮೃತಾ ಸುರೇಂದ್ರನಾಥ್ ನಟನೆ ಸಹಜವಾಗಿದೆ. ಕೆಲವೊಂದು ಸೂಕ್ಷ್ಮತೆಗಳು ಹಾಗೂ ಮೊದಲರ್ಧದ ಬಗ್ಗೆ ಇನ್ನಷ್ಟು ಗಮನಹರಿಸಿದ್ದರೆ ಇದೊಂದು ಉತ್ತಮ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗುತ್ತಿತ್ತು. ಆದರೂ, ಹೊಸಬರ ತಂಡದ ಈ ವಿಭಿನ್ನ ಪ್ರಯತ್ನ ಮೆಚ್ಚುವಂಥದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts