ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವೆಂದರೆ ಮಕ್ಕಳು ಮತ್ತು ತಾಯಂದಿರಿಗೆ ಅಚ್ಚುಮೆಚ್ಚಿನ ಹಬ್ಬ. ತಾಯಿ ತನ್ನ ಪುಟಾಣಿ ಮಗುವಿಗೆ ಕೃಷ್ಣನಂತೆ ಅಥವಾ ರಾಧೆಯಂತೆ ಸಿಂಗರಿಸಿ, ಸಂಭ್ರಮಿಸುವ ದಿನ. ಸ್ಯಾಂಡಲ್‌ವುಡ್ ತಾರೆಯರು ಸಹ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಮಕ್ಕಳೊಂದಿಗೆ ಸಡಗರದಿಂದ ಆಚರಿಸಿದ್ದಾರೆ.
ರಿಷಬ್ ಶೆಟ್ಟಿ ಮಕ್ಕಳ ರಾಧಾ-ಕೃಷ್ಣ ಲುಕ್
ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಪುತ್ರ ರನ್ವಿತ್ ಶೆಟ್ಟಿಗೆ ಶ್ರೀಕೃಷ್ಣನ ಗೆಟಪ್ ಹಾಕಿದ್ದರೆ, ಮುದ್ದು ಪುಟಾಣಿ ಮಗಳು ರಾಧ್ಯಾ ಶೆಟ್ಟಿ ರಾಧೆಯಾಗಿ ಮಿಂಚಿದ್ದಾಳೆ. ಪ್ರಗತಿ ಶೆಟ್ಟಿ ಜಾಲತಾಣದಲ್ಲಿ ಮಕ್ಕಳ ೆಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಅಮೂಲ್ಯ ಅವಳಿ ಕೃಷ್ಣರು
ನಟಿ ಅಮೂಲ್ಯ ಸಹ ತಮ್ಮ ಅವಳಿ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕಿ ೆಟೋಶೂಟ್ ಮಾಡಿ ಖುಷಿ ಪಟ್ಟಿದ್ದಾರೆ. ಅಥರ್ವ್ ಮತ್ತು ಅಧಾವ್ ಇಬ್ಬರೂ ಕೊಳಲು ಹಿಡಿದು ಗೋಗಳ ಜತೆ ಆಟವಾಡಿ ಸಂಭ್ರಮಿಸಿರುವ ೆಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.

ರಾಧೆಯಾದ ನಟಿ ರಚಿಕಾ
ಮಾಡೆಲ್, ನಟಿ ರಚಿಕಾ ಸುರೇಶ್ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಧೆಯ ಹಾಗೆ ೆಟೋಶೂಟ್ ಮಾಡಿ ಹಂಚಿಕೊಂಡಿದ್ದಾರೆ. ರೂಪದರ್ಶಿಯಾಗಿ ಶ್ರೀಲಂಕಾ ಸೇರಿ ಹಲವು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ, ತಮಿಳಿನ ‘ಎಂಜಾಯ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅವರು, ಇದೀಗ ಕನ್ನಡದ ಚಿತ್ರವೊಂದರಲ್ಲಿ ಮಿಂಚಲು ರೆಡಿಯಾಗಿದ್ದಾರೆ. ರಾಧೆಯ ಲುಕ್‌ನಲ್ಲಿರುವ ರಚಿಕಾ ೆಟೋಗಳು ಸಹ ವೈರಲ್ ಆಗಿವೆ.

ಕೃಷ್ಣ ಅಜೇಯ್ ರಾವ್ ಪುತ್ರಿಯ ರಾಧೆ ಲುಕ್
ಸ್ಯಾಂಡಲ್‌ವುಡ್ ನಟ ಅಜೇಯ್ ರಾವ್ ‘ಕೃಷ್ಣ’ ಎಂದೇ ಹೆಸರು ಮಾಡಿದವರು. ‘ಕೃಷ್ಣನ್ ಲವ್‌ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ ಲೀಲಾ’, ‘ಕೃಷ್ಣ ರುಕ್ಕು’ ಸೇರಿ ಎಂಟು ಸಿನಿಮಾಗಳಲ್ಲಿ ಅವರ ಹೆಸರು ಕೃಷ್ಣ. ಅವರ ಪುತ್ರಿ ಚೆರಿಷ್ಮಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಚೆರಿಷ್ಮಾ ರಾಧೆಯ ಲುಕ್‌ನಲ್ಲಿ ಮಿಂಚಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಕರ್ ತೂಗುದೀಪ ನಿರ್ದೇಶಿಸುತ್ತಿರುವ ವಿರಾಟ್, ಸಂಜನಾ ಆನಂದ್ ನಟಿಸುತ್ತಿರುವ ‘ರಾಯಲ್’ ಚಿತ್ರದ ಹೊಸ ಲುಕ್ ರಿಲೀಸ್ ಮಾಡಲಾಗಿದೆ. ಅದರಲ್ಲಿ ನಾಯಕ ವಿರಾಟ್ ಕೃಷ್ಣನ ಲುಕ್‌ನಲ್ಲಿ ಮಿಂಚಿದ್ದಾರೆ. ನಟ ಧರ್ಮಣ್ಣ ಕಡೂರು ಪುತ್ರಿ ಹಂಸಿಕಾಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸಿದ್ದಾರೆ.